ಹಲೋ ಸ್ನೇಹಿತರೇ, ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿನ ಪ್ರಸ್ತಕ ಸಾಲಿಗೆ ಎಸ್.ಎಫ್.ಸಿ ಅನುದಾನದ ಶೇ.24.10, 7.25 ಮತ್ತು 5 ರ ಎಸ್.ಸಿ.ಎಸ್.ಪಿ ಉಪ ಘಟಕದಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರುಗೋಡು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀರವರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಎಂಬಿಬಿಎಸ್, ಬಿಇ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಖರೀದಿಸಲು ಸಹಾಯಧನ ಮತ್ತು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಕಲೆ ಸಾಂಸ್ಕತಿಕ ಹಾಗೂ ವ್ಯಾಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ಹಾಗೂ ಉದ್ಯೋಗಸ್ಥ ವಿಕಲನಚೇತನರಿಗೆ ತ್ರಿಚಕ್ರ ವಾಹನ ನೀಡಲು ಸರ್ಕಾರ ತಿಳಿಸಿದೆ, ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಗುರುತಿನ ಕಾರ್ಡ್ ಮತ್ತು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪ್ರಸ್ತಕ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕ ಪಟ್ಟಿ ಮತ್ತು ಭಾವಚಿತ್ರ, ವಿಕಲಚೇತನ ಇದ್ದಲ್ಲಿ ವಿಕಲಚೇತನ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಡಿಸೆಂಬರ್ 28 ರೊಳಗೆ ಅರ್ಜಿಯೊಂದಿಗೆ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ಇಲಾಖೆಯಲ್ಲಿ ಕೇಳಿ ತಿಳಿಯಿರಿ.
ಇತರೆ ವಿಷಯಗಳು:
ಮುಂದಿನ ತಿಂಗಳಿನಿಂದ ಉಚಿತ ರೇಷನ್ ಸಿಗಲ್ಲ!! ಈ ಕಾರ್ಡ್ ಇದ್ದರೆ ಮಾತ್ರ ಉಚಿತ ಪಡಿತರ ಲಭ್ಯ
ರಾಜ್ಯದ ಎರಡು ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್!! ತಕ್ಷಣ ಈ ಕೆಲಸ ಮಾಡಿ