rtgh

BBK10: ದೊಡ್ಮನೆ ಪ್ರೇಮ ಪಕ್ಷಿಗಳ ಜಗಳ ತಾರಕಕ್ಕೆ ಏರಿಕೆ.!! ಬೆನ್ನ ಹಿಂದೆ ಚೂರಿ ಹಾಕಿದ್ದು ನೀವೇ ಎಂದ ನೆಟ್ಟಿಗರು

ಹಲೋ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ದಿನಗಳು ಉರುಳಿದಂತೆ ಮನೆಯವರ ಮನ ಮತ್ತು ಮನೆಯ ನಡವಳಿಕೆಗಳು ಕೂಡ ಬದಲಾವಣೆಯನ್ನು ನಾವು ಕಾಣಬಹುದಾಗಿದೆ. ಪ್ರಾರಂಭದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಇದ್ದಂತಹ ಅಭಿಪ್ರಾಯ ಮತ್ತು ಆಸಕ್ತಿ ದಿನ ಕಳೆದಂತೆ ಬದಲಾವಣೆ ಹೊಂದುವುದು ಸರ್ವೆ ಸಾಮಾನ್ಯವಾದುದ್ದಾಗಿದೆ. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಪ್ರೇಮ ಪಕ್ಷಿಗಳಂತಿದ್ದ ಕಾರ್ತಿಕ್‌ ಹಾಗೂ ಸಂಗೀತರವರ ಮಧ್ಯ ಇದೀಗ ಇದೇ ರೀತಿಯ ಭಿನ್ನಾಭಿಪ್ರಾಯಗಳು ಮಾಡಿರುವುದನ್ನು ನಾವು ನೋಡಬಹುದಾಗಿದೆ.

fight on bigg boss kannada house

ಮೈಕಲ್‌ ಮಾತಿಗೆ ಸೊಪ್ಪು ಹಾಕಿದ ಕಾರ್ತಿಕ್‌ ‍ಮಹೇಶ್

ಸಂಗೀತಾ ಬಗೆಗಿನ ಬೇಸರ ಮೈಕೆಲ್‌ಗೆ ಇನ್ನೂ ಹೆಚ್ಚಾಗಿದೆ. ಊಟ ಮುಗಿದ ಮೇಲೂ ಸಂಗೀತಾ ಬಗ್ಗೆ ತಮ್ಮಲ್ಲೇ ಮಾತನಾಡಿದ್ದಾರೆ. ಮನೆಯಲ್ಲಿ ಜೋರು ಧ್ವನಿಯಲ್ಲಿ ಮಾತನಾಡುವುದು ಅಷ್ಟೆ. ಆದ್ರೆ ಜೋರು ಧ್ವನಿ ಬಿಟ್ಟರೆ ಸೆನ್ಸಿಬಲ್ ವಾಯ್ಸ್ ಅನ್ನೋದು ಅಲ್ವೇ ಅಲ್ಲ. ಒಂದು ವೇಳೆ ಈ ವಾರದ ಸೆನ್ಸಿಬಲ್ ವಾಯ್ಸ್ ಯಾರು ಎಂಬ ವೋಟ್ ಇಟ್ಟರೆ ಕಡೆಯಲ್ಲಿ ಬರುತ್ತಾಳೆ ಎಂದಿದ್ದಾರೆ. ಈ ವಿಷಯದ ಮಾತಿಗೆ ಕಾರ್ತಿಕ್‌ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಂಗೀತ ಬಗ್ಗೆ ಹೇಳಿದ ಕಾರ್ತಿಕ್

ಕಾರ್ತಿಕ್ ಮತ್ತು ಸಂಗೀತಾ ದೂರ ದೂರ ಆಗಿದ್ದಾರೆ ಆದ್ರೆ ಅವರಿಬ್ಬರು ಮತ್ತೆ ಒಂದಾಗಬಹುದು ಎಂಬ ಅಭಿಪ್ರಾಯ ಹಲವರಲ್ಲಿ ಇನ್ನು ಇದೆ ಎಂದರು ತಪ್ಪಾಗುವುದಿಲ್ಲ.

ಒತ್ತುವರಿ ಜಾಗಗಳ ವಿರುದ್ಧ ಕಠಿಣ ಕ್ರಮ..! ಮನೆ ನಿರ್ಮಿಸಿಕೊಂಡಿದ್ದರೆ ಈ ದಿನಾಂಕದೊಳಗೆ ತೆರವುಗೊಳಿಸಲು ಸರ್ಕಾರದ ನೋಟಿಸ್


ಒಂದಾಗಲಿ ಎಂದೇ ಬಯಸುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ಸಂಗೀತಾ ಕಣ್ಣೀರು ಹಾಕುತ್ತಿದ್ದಾಗ ಸಂಗೀತಾರನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಕಾರ್ತಿಕ್ ಮಾಡಿದ್ದರು. ಆದರೆ, ಈಗ ಮೈಕೆಲ್ ಜೊತೆಗೆ ಸೇರಿಕೊಂಡು ಸಂಗೀತಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಕಾರ್ತಿಕ್‌ ನಡವಳಿಕೆ ನೋಡಿ ಶಾಕ್‌ ಆದ ಜನತೆ:

ಕಾರ್ತಿಕ್ ನಡವಳಿಕೆಗೆ ಸೋಷಿಯಲ್‌ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಕಾರ್ತಿಕ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. “ಸಂಗೀತಾ ಬಗ್ಗೆ ಹಿಂದೆ ಮಾತನಾಡುತ್ತಿದ್ದೀಯಾಲ್ವಾ ಇದೇನಾ ಫ್ರೆಂಡ್‌ಶಿಪ್”, “ಇಂತಹ ನಡವಳಿಯಿಂದಾನೇ ಸಂಗೀತಾ, ಕಾರ್ತಿಕ್‌ನಿಂದ ದೂರ ಆಗಿರುವುದು”, “ಸಂಗೀತಾ ಮಾತ್ರ ಹಿಂದೆ ಮಾತನಾಡಿದ್ದಕ್ಕೆ ಕೆಟ್ಟವರು. ಈಗ ಇವರು ಮಾಡುತ್ತಿರುವುದು ಏನು?”‘ ಎಂಬೆಲ್ಲಾ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಅಷ್ಟೇ ಅಲ್ಲ ಒಂದಷ್ಟು ಜನ ಕಾರ್ತಿಕ್‌ಗೆ ಬುದ್ದಿವಾದ ಹೇಳಿದ್ದಾರೆ. ಈ ರೀತಿ ನಡೆದುಕೊಂಡಿದ್ದು ತಪ್ಪು ಎಂದಿದ್ದಾರೆ.

RBI ಹೊಸ ನಿಯಮ: ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಇನ್ನೂ ಕಷ್ಟಕರ!! ಸಾಲದ ನಿಯಮ ಬಿಗಿ, ಬಡ್ಡಿದರದಲ್ಲಿ ಹೆಚ್ಚಳ

ಎಲ್ಲಾ ರೈತರಿಗೂ ಸರ್ಕಾರದಿಂದ ಭರ್ಜರಿ ಉಡುಗೊರೆ: ಪ್ರತಿ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ!

Leave a Comment