rtgh

ಸಹಕಾರ ಸಂಘದಲ್ಲಿ ಸಾಲ ಪಡೆದ ರೈತರಿಗೆ ಬಿಗ್‌ ರಿಲೀಫ್.‌! ಈ 6 ಜಿಲ್ಲೆಯಲ್ಲಿ ಶೀತಲ ಗೃಹ ನಿರ್ಮಾಣ

ಹಲೋ ಸ್ನೇಹಿತರೇ, ರಾಜ್ಯ ಸಚಿವ ಸಂಪುಟ ಸಭೆ ರೈತರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸಹಕಾರ ಸಂಘಗಳಲ್ಲಿ ಪಡೆದ ಸಾಲಕ್ಕೆ ಅಸಲು ಪಾವತಿಸಿದ್ರೆ ಬಡ್ಡಿ ಮನ್ನಾ ಮಾಡುವುದಾಗಿ ತಿಳಿಸಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಕೊನೆಯವರೆಗು ಓದಿ.

farmars loan interest waiver

ಸಹಕಾರ ಸಂಘಗಳ ಮೂಲಕ ರೈತರು ಪಡೆದ ಮಧ್ಯಮಾವಧಿ & ದೀರ್ಘಾವಧಿ ಸಾಲದ ಅಸಲು ಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಅನುಮೋದನೆಯನ್ನು ನೀಡಿದೆ.

ರೈತರಿಗೆ ತುಸು ರಿಲೀಫ್‌ ನೀಡಲು ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಪ್ರಾಥಮಿಕ ಸಹಕಾರ ಸಂಘ, & ಭೂ ಅಭಿವೃದ್ಧಿ ಬ್ಯಾಂಕ್‌ಗಳ & ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿನ ಸುಸ್ತಿ ಸಾಲಗಳಿಗೆ ಅನ್ವ ಮಾಡಲಾಗುವುದು.

ಫೆಬ್ರವರಿ 29 ರೊಳಗೆ ಅಸಲು ಮರುಪಾವತಿ

ಸಾಲಗಳ ಅಸಲು ಮರು ಪಾವತಿ ಮಾಡಿದರೆ ಅದರ ಮೇಲಿನ ಬಡ್ಡಿ ಮನ್ನಾ ಆಗುತ್ತದೆ. ರೈತರು ಈ ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕೆಂದರೆ ಇದೇ ತಿಂಗಳ 29 ರೊಳಗಾಗಿ ಸಾಲಗಳ ಅಸಲು ಮರುಪಾವತಿ ಮಾಡಬೇಕು. 2023ರ ಡಿಸೆಂಬರ್‌ 31ಕ್ಕೆ ಸುಸ್ತಿಯಾದ ರೈತರ ಕೃಷಿ & ಕೃಷಿ ಸಂಬಂಧಿತ ಸಾಲಗಳಿಗೆ ಅನ್ವಯಿಸುವಂತೆ ಕಳೆದ ಜ.20 ರಂದು ಸರ್ಕಾರ ಆದೇಶ ಪ್ರಕಟಿಸಿದೆ.ಈ ಕ್ರಮಕ್ಕೆ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. ಈ ತೀರ್ಮಾನದಿಂದ ಕೃಷಿ ಸಾಲದ ಮೇಲಿನ ಒಟ್ಟು 440.20 ಕೋಟಿ ರೂ. ಸುಸ್ತಿ ಬಡ್ಡಿ ಮನ್ನಾ ಆಗುತ್ತದೆ.


6 ಶೀತಲ ಗೃಹ ನಿರ್ಮಾಣ

ನಬಾರ್ಡ್‌ ನೆರವಿನಿಂದ 6 ಜಿಲ್ಲೆಯಲ್ಲಿ ತಲಾ ಒಂದೊಂದು ಬಹುಉತ್ಪನ್ನ ಶೀತಲಗೃಹಗಳನ್ನು ಒಟ್ಟು 65.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು. ಈ ಮೂಲಕ ಒಟ್ಟು 14,000 ಟನ್‌ ಆಹಾರಧಾನ್ಯದ ಸಂಗ್ರಹಕ್ಕೆ ಅನುಕೂಲವಾಗಲಿದೆ, ಆಲೂಗಡ್ಡೆ, ಮೆಣಸಿನಕಾಯಿ, ಶುಂಠಿ, ಅರಿಶಿಣ, ಕರಿಮೆಣಸು, ನಿಂಬೆ, ಒಣದ್ರಾಕ್ಷಿ, ಮತ್ತು ಕೊತ್ತಂಬರಿ ಇನ್ನು ಹಲವು ವಸ್ತುಗಳ ಸಂಗ್ರಹಕ್ಕೆ ಸಾಧ್ಯವಾಗುತ್ತದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನ ಮಟ್ಟಿ ಫಾರಂ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಾವ್ವೇನಹಳ್ಳಿಯ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಮರುಕನಹಳ್ಳಿ, ಶಿವಮೊಗ್ಗ ಜಿಲ್ಲೆಶಿಕಾರಿಪುರದ ಕಾಳೇನಹಳ್ಳಿ, ವಿಜಯಪುರದ ಅರಕೇರೆ & ಹಾಸನದ ಸಂತೇಪೇಟೆಯ ಎಪಿಎಂಸಿ ಯಾರ್ಡ್‌ನಲ್ಲಿಈ ಶೀಥಲಗೃಹಗಳು ನಿರ್ಮಾಣಗೊಳ್ಳಲಿವೆ.

ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲು

ರಾಷ್ಟ್ರ & ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವ ಪ್ರತಿಭಾವಂತ ಕ್ರೀಡಾಧಿಪಟುಗಳಿಗೆ ರಾಜ್ಯ ನಾಗರಿಕ ಸೇವೆಗಳ ನೇರ ನೇಮಕಾತಿಯಲ್ಲಿ ಶೇ.2ರಷ್ಟು ಹುದ್ದೆಗೆ ಮೀಸಲು ಕಲ್ಪಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. ಕ್ರೀಡಾಪಟುಗಳನ್ನು ಉತ್ತೇಜಿಸಲು ಕೈಗೊಂಡಿರುವ ಈ ತೀರ್ಮಾನಕ್ಕೆ ‘ಕರ್ನಾಟಕ ನಾಗರಿಕ ಸೇವಾ ನಿಯಮಗಳು -1977ರ ನಿಯಮ-9ಕ್ಕೆ ತಿದ್ದುಪಡಿ ತಂದು ಆಕ್ಷೇಪಣೆ ಆಹ್ವಾನಿಸಬೇಕಾಗಿದೆ. ಬಳಿಕ ನಿಯಮಧಿಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಬಹುದು. ಅಗತ್ಯ ಬಿದ್ದರೆ ಕರಡು ನಿಯಮಗಳನ್ನು ಮತ್ತೊಮ್ಮೆ ಸಂಪುಟದ ಅನುಮೋದನೆಗೆ ತರಬಹುದು ಎಂದು ನಿರ್ಧರಿಸಲಾಗಿದೆ.

ಕೇಂದ್ರ ನೌಕರರಿಗೆ ಬಜೆಟ್‌ ಜಾಕ್‌ ಪಾಟ್! ‌ಸಂಬಳದಲ್ಲಿ ಶೇಕಡಾ ಇಷ್ಟು ಹೆಚ್ಚಳ

ದೇಶದ ಕೋಟ್ಯಾಂತರ ಮಹಿಳೆಯರಿಗೆ ಲಾಟ್ರಿ.! ಬಜೆಟ್‌ನಲ್ಲಿ ಘೋಷಣೆಯಾಯ್ತು ಲಕ್ಷಾಧಿಪತಿಯಾಗುವ ಯೋಜನೆ

Leave a Comment