ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕದಲ್ಲಿ ಈ ಬಾರಿ ಹೆಚ್ಚಿನ ಬರ ಪರಿಸ್ಥಿತಿ ಒಂಟಾಗಿದೆ. ರಾಜ್ಯ ಸರ್ಕಾರವು ರೈತರಿಗೆ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಕೂಡ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರವಾಗಿ ಇನ್ನೆರಡು ದಿನಗಳಲ್ಲಿ ಈ ಹಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಕೇಂದ್ರ ಸರ್ಕಾರಕ್ಕೆ ಸೆಪ್ಟೆಂಬರ್ 20 ನೇ ತಾರೀಕು ಮನವಿಯನ್ನು ಸಲ್ಲಿಸಿ, ಕರ್ನಾಟಕ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ ಅವರಿಗೆ ಪರಿಹಾರ ನೀಡಲು 18,172 ಕೋಟಿ ಪರಿಹಾರವನ್ನು ಕೇಳಲಾಗಿದೆ. ಕೇಂದ್ರ ಸರ್ಕಾರದವರು ಇದುವರೆಗೆ ಸಲ್ಲಿಸಿದ ಮನವಿಯ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರವು ಬರಗಾಲದ ಸಮಸ್ಯೆ ಪರಿಹಾರ ಮಾಡಲು ಯಾವುದೇ ಹಣ ಬಿಡುಗಡೆ ಮಾಡಿಲ್ಲ.
ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಕೃಷಿ ಸಚಿವರು ಕೃಷ್ಣ ಬೈರೇಗೌಡ ಅವರು ಪ್ರಧಾನ ಮಂತ್ರಿ ಭೇಟಿ ಕೂಡ ನೀಡಿದ್ದೇವೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಬಹಳ ತೀವ್ರವಾದಂತಹ ಬರ ಪರಿಸ್ಥಿತಿ ಇದೆ. ಹಾಗೂ 236 ತಾಲುಕುಗಳಲ್ಲಿ 223 ತಾಲೂಕಿನಲ್ಲಿ ಬರ ಪರಿಸ್ಥಿತಿ ಇದೆ ಎಂದು ಪ್ರಧಾನಿಯವರಿಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಸಹ ಓದಿ: ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ: ಸುಪ್ರಿಂ ಕೋರ್ಟಿನಿಂದ ಬಂತು ಮಹತ್ವದ ತೀರ್ಪು
ಕೇಂದ್ರದಿಂದ ಬಂದಂತಹ ಉನ್ನತ ಅಧಿಕಾರಿಗಳ ತಂಡವು ಕೂಡ 13 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದು, ರಾಜ್ಯದಲ್ಲಿ ರಾಜ್ಯದ ಬರದ ತೀವ್ರತೆ ಮತ್ತು ಇಲ್ಲಿಯ ಸ್ಥಿತಿಗಳು ಸಂಪೂರ್ಣ ಸಮಸ್ಯೆಗಳು ಕೇಂದ್ರಕ್ಕೆ ಮನವರಿಕೆ ಆಗಿದೆ ಎಂದು ಭಾವಿಸಿದ್ದೇವೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ. ಕೇಂದ್ರದ ತಂಡವೂ ಬಂದು ಇಲ್ಲಿ ಈ ಬಗ್ಗೆ ವರದಿ ಕೊಟ್ಟು, ಆಗಸ್ಟ್ ತಿಂಗಳಲ್ಲಿ 70% ಮಳೆ ಕೊರತೆ ಆಗಿದೆ. ಜೂನ್ ತಿಂಗಳಲ್ಲಿ 56% ಮಳೆ ಕೊರತೆ ಆಗಿದೆ. ಇದೆಲ್ಲದರ ಸ್ಪಷ್ಟನೆಯ ವರದಿಯನ್ನು ಕೂಡ ಕೊಡಲಾಗಿದೆ. ಎಂದು ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಆಗದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2000 ರೂ ಮೊದಲ ಕಂತಿನ ಪರಿಹಾರವನ್ನು ರೈತರಿಗೆ ಕೊಡಲು ಮುಖ್ಯಮಂತ್ರಿಯವರು ಮಾಹಿತಿ ನೀಡಿದ್ದಾರೆ. ರೈತರ ಹೆಸರು ಜಮೀನಿನ ಲಿಂಕ್, ಆಧಾರ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್ ಇದ್ದವರಿಗೆ ಹಣ ಯಾವುದೇ ಸೋರಿಕೆಯಿಲ್ಲದೇ ಹಣವನ್ನು ಜಮೆ ಮಾಡಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಕೆಲವು ತಾಲೂಕುಗಳಿಗೆ ಜಮೆ ಮಾಡಲಾಗುತ್ತದೆ. ಈಗಾಗಲೇ ಹಣ ಸರ್ಕಾರಕ್ಕೆ ಹಣ ಬಂದಿದ್ದು, ಶೀಘ್ರವೇ ಬಿಡುಗಡೆಗೆ ಸಜ್ಜಾಗಿದೆ ಎಂದು ಕೃಷ್ಣೇ ಬೈರೇಗೌಡ ತಿಳಿಸಿದ್ದಾರೆ.
ಇತರೆ ವಿಷಯಗಳು:
2024 ರಲ್ಲಿ ರಜೆಗಳದ್ದೇ ಸುರಿಮಳೆ! ಹೊಸ ವರ್ಷದ ಸಂಪೂರ್ಣ ಹಾಲಿಡೇ ಲಿಸ್ಟ್ ಇಲ್ಲಿದೆ
ರೇಷನ್ ಕಾರ್ಡುದಾರರಿಗೆ ಹೊಸ ನಿಯಮ!! ಜನವರಿ 1 ರಿಂದ ದೇಶಾದ್ಯಂತ ಜಾರಿ