ಹಲೋ ಸ್ನೇಹಿತರೇ, ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ನಿಮಗೆ ಏನು ಸಹಯವಾಗುತ್ತದೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರಾದ ಕೃಷ್ಣ ಬೈರೇಗೌಡರವರು, ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯಗಳು ನಡೆದಿವೆ. ಇನ್ನು ಮುಂದೆ ಅಭಿಯಾನದ ರೂಪದಲ್ಲಿ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು. ಜಮೀನಿನ ಮಾಲೀಕತ್ವ ಯಾರದ್ದು? ಯಾರಿಂದ ಯಾರಿಗೆ ಹೇಗೆ ಬಂತು, ಮಾರಾಟವಾಯಿತೆ ಅಥವಾ ದಾನದ ರೂಪದಲ್ಲಿ ಬಂದಿತೆ ಎಂಬುದರ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಮಾಡುವ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು. ಈಗಾಗಲೇ ಸುಮಾರು 2.40 ಕೋಟಿಯಷ್ಟು ಸರ್ವೆ ಸಂಖ್ಯೆಗಳ ಪಹಣಿಗಳಿವೆ. ಅವುಗಳನ್ನು ರಕ್ಷಿಸಲು ಡಿಜಿಟಲೀಕರಣ ಮಾಡಲಾಗುವುದು ಎಂದು ಸಚಿವರೇ ತಿಳಿಸಿದ್ದಾರೆ.
ಈ ಮೂಲಕ ಅನ್ನದಾತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೆಚ್ಚಾಗಿ ಗಮನಕೊಡುತ್ತಿರುವ ಸಚಿವರು ಕೂಡ ರೈತರಿಗಾಗಿ ಮತ್ತು ಕೃಷಿ ಭೂಮಿಗಾಗಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಂಮ್ಮಿಕೊಳ್ಳುತ್ತಲೆ ಇದೆ ಇದರಿಂದ ಪ್ರತಿಯೊಬ್ಬ ರೈತರು ಸ್ವಾವಂಭಿಯಾಗಿ ಬದುಕಲು ಸಹಕಾರಿಯಾಗುತ್ತದೆ ಎಂದರು ತಪ್ಪಾಗುವುದಿಲ್ಲ.
ಇತರೆ ವಿಷಯಗಳು:
ಡಿಸೆಂಬರ್ 23ರಂದು ಎಲ್ಲಾ ರೈತರ ಸಾಲ ಮನ್ನಾ.!! ಈ ಕೂಡಲೇ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರದ ಘೋಷಣೆ
ಚೀನಾದ ಮತ್ತೊಂದು ವೈರಸ್ ಮಕ್ಕಳೇ ಟಾರ್ಗೆಟ್!! ಭಾರತದಲ್ಲಿ ಹೈ ಅಲರ್ಟ್ ಘೋಷಣೆ