rtgh

ಸಿಕ್ಕ ಸಿಕ್ಕ ಕಡೆ ಆಧಾರ್‌, ಪಾನ್‌ ಕಾರ್ಡ್‌ ಕೊಡುವ ಮುನ್ನಾ ಎಚ್ಚರ!! ನಿಮ್ಮ ಹೆಸರಲ್ಲೇ ನಡೆಯತ್ತೆ ಬೇರೆಯವರ ಹಣ ಕದಿಯುವ ವಹಿವಾಟು

ಎಲ್ಲೆಂದರಲ್ಲಿ ಆಧಾರ್‌ ಪಾನ್‌ ಕಾರ್ಡ್‌ ಕೊಡುವ ಮುನ್ನಾ ಎಚ್ಚರ ಯಾಕೆಂದರೆ ನಿಮ್ಮ ಡಾಕ್ಯುಮೆಂಟಗಳೇ ಬೇರೆಯವರ ಜೇಬು ತುಂಬಿಸುವ ಅಸ್ತ್ರಗಳಾಗಬಹುದು. ಸಾರ್ವಜನಿಕರ Kyc ಪಡೆದು ಬೇನಾಮಿ ಖಾತೆ ಸೃಷ್ಟಿಸುತ್ತಿದ್ದ ಗ್ಯಾಂಗ್‌ ಒಂದನ್ನಾ ಸೈಬರ್‌ ಕ್ರೈಂ ಪೋಲಿಸಲು ಪತ್ತೆ ಹಚ್ಚಿದ್ದಾರೆ.

Cyber Crime

ಸಿಕ್ಕ ಸಿಕ್ಕ ಕಡೆ ಆಧಾರ್‌ ಪಾನ್‌ ಕಾರ್ಡ್‌ ಕೊಡೋ ಮುನ್ನಾ ಎಚ್ಚರ. ನಿಮ್ಮ ಹೆಸರಿನಲ್ಲೇ ನಡೆಯತ್ತೆ ಬೇರೆಯವರ ಬ್ಯಾಂಕ್‌ ವಹಿವಾಟು ನೀವು ಎಲ್ಲೆಂದರಲ್ಲಿ ಆಧಾರ್‌ ಕಾರ್ಡ್‌ ಪಾನ್‌ ಡ್ರೈವಿಂಗ್‌ ಲೈಸೆನ್ಸ್‌, ವೋಟರ್‌ ಐಡಿ ಕೊಡುವಾಗ ಸ್ವಲ್ಪ ಹುಷಾರ್‌ ಆಗಿರಿ ಯಾಕಂದ್ರೆ ನೀವು ಕೊಡುವ ಗುರುತಿನ ಚೀಟಿಗಳು ಅಕ್ರಮ ಚಟುವಟಿಕೆ ನಡೆಸುವ ದಂಧೆ ಕೋರರಿಗೆ ಹಣದ ಖಜಾನೆಯಾಗಿ ಮಾರ್ಪಾಡಾಗಬಹುದು.

ಇದನ್ನು ಸಹ ಓದಿ: ಕಣ್ಣಿನ ಚುರುಕುತನಕ್ಕೆ ಒಂದು ಸವಾಲ್.! ಈ ಚಿತ್ರದಲ್ಲಿ ಇರುವ ʼ8ʼಅನ್ನು 8 ಸೆಕೆಂಡ್‌ನಲ್ಲಿ ಹುಡುಕಲು ಸಾಧ್ಯನಾ?

ಸಾರ್ವಜನಿಕರ Kyc ದಾಖಲೆಗಳನ್ನು ಪಡೆದುಕೊಂಡು, ಬೇನಾಮಿ ಬ್ಯಾಂಕ್‌ ಖಾತೆ ಸೃಷ್ಟಿಸುತ್ತಿದ್ದಾ ಸೈಬರ್‌ ಕ್ರೈಂ ಜಾಲವನ್ನು ನಗರದ ಸೈಬರ್‌ ಕ್ರೈಂ ಪೋಲಿಸರು ಪತ್ತೆ ಹಚ್ಚಿದ್ದಾರೆ. ಕೇರಳ ಮೂಲದ ಗ್ಯಾಂಗ್‌ ಒಂದು ನಗರದಲ್ಲಿ ಸದ್ದಿಲ್ಲದೆ ಬೇನಾಮಿ ಬ್ಯಾಂಕ್‌ ಖಾತೆ ಸೃಷ್ಠಿಸಿ ನಂತರ ಆ ಖಾತೆಗಳ ಮೂಲಕ ಅಕ್ರಮ ಚಟುವಟಿಕೆ ನೆಡೆಸಿದ್ದಾರೆ. ಮತ್ತಿಕೆರೆಯಲ್ಲಿ ಮನೆಯಿಂದಲೇ ಕಛೇರಿ ಮಾಡಿದ ಈ ಗ್ಯಾಂಗ್‌ ಸುಮಾರು ಬ್ಯಾಂಕ್‌ ಖಾತೆ ತೆರೆದು ಬೇರೆ ಬೇರೆ ಕೃತ್ಯಗಳಿಗೆ ಬಳಸುತ್ತಿದ್ದರಂತೆ. ಮಂಜೇಶ್‌ ಅನ್ನುವ ವ್ಯಕ್ತಿ ಕೊಟ್ಟಂತಹ ಒಂದು ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಸೈಬರ್‌ ಕ್ರೈಂ ಪೋಲಿಸರು ಕೇರಳ ಮೂಲದ ಸಮೀರ್‌, ಅಹಮದ್‌ ಹಸನ್‌, ಮಹಮ್ಮದ್‌ ಇರ್ಫಾನ್‌, ಅಮೂಲ್‌ ಬಾಬು, ತನ್ಜಿಲ್‌ ಹಾಗೂ ಬೆಂಗಲೂರಿನ ಮಂಜುನಾಥ ಎಂಬುವವರ ಬಂಧನ ಮಾಡಿದ್ದಾರೆ.


ಇನ್ನೂ ದುಬೈ ನಲ್ಲಿದ ಕಿಂಗ್‌ ಪಿನ್‌ ಒಬ್ಬ ಈ ಗ್ಯಾಂಗ್‌ ಅನ್ನು ಅಪರೇಟ್‌ ಮಾಡುತ್ತಿದ್ದಾನಂತೆ. ಆತನ ಸೂಚನೆ ಮೇರೆಗೆ ನಗರದ ವಿದ್ಯಾರ್ಥಿಗಳು ಸೆಲ್ಸ್‌ ಮ್ಯಾನ್‌ ಗಳು ನೃಕರರ Kyc ಸಂಗ್ರಹಿಸುತ್ತಿದ್ದರಂತೆ. ನಂತರ ಬ್ಯಾಂಕ್‌ ಖಾತೆ ತೆರೆದು ದುಬೈ ಸೇರಿದಂತೆ ಬೇರೆಡೆ ಹಣ ವರ್ಗಾವಣೆ ಸಾರ್ವಜನಿಕರಿಗೆ ವಂಚಿಸಲು ಬಳಸುತ್ತಾ ಇದ್ದರಂತೆ. ಸದ್ಯ ಸಿಸಿಬಿ ಪೋಲಿಸರು ದುಬೈ ನಲ್ಲಿರುವ ಕಿಂಗ್‌ಪಿನ್‌ ಗೆ ಬಲೆ ಬೀಸಿದ್ದಾರೆ.

ಇತರೆ ವಿಷಯಗಳು:

ಇಂದಿನಿಂದ ಈ ಜನರಿಗೆ LPG ಸಬ್ಸಿಡಿ ಬಂದ್!!‌ ಇನ್ಮುಂದೆ ಸಬ್ಸಿಡಿ ಪಡೆಯಲು ಈ ಕೆಲಸ ಕಡ್ಡಾಯ

ಬಗೈರ್ ಹುಕುಂ ಅರ್ಜಿದಾರರಿಗೆ ಶುಭ ಸುದ್ದಿ!!ಅಕ್ರಮ-ಸಕ್ರಮ ಯೋಜನೆಯಡಿ ಭೂ ಮಂಜೂರಾತಿ ಮಾಡಲು ಆದೇಶ

Leave a Comment