rtgh

‘ಸಿಎಂ ಜನತಾ ದರ್ಶನ’ಕ್ಕೆ ಭರ್ಜರಿ ರೆಸ್ಪಾನ್ಸ್: 3,812 ಅರ್ಜಿ ಸ್ವೀಕಾರ, ಇತ್ಯರ್ಥಕ್ಕೆ 15 ದಿನಗಳ ಡೆಡ್ ಲೈನ್

ಹಲೋ ಸ್ನೇಹಿತರೇ, ಜನರ ಸಮಸ್ಯೆ ಆಲಿಸಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಡೆಸಿದ ಜನಸ್ಪಂದನದಲ್ಲಿ 3812 ಅರ್ಜಿಗಳು ಬಂದಿವೆ. ಐಪಿಜಿಆರ್‌ಎಸ್ ಅರ್ಜಿಯಲ್ಲಿ ಈಗಾಗಲೇ 2862 ಅರ್ಜಿಗಳನ್ನು ನೋಂದಾಯಿಸಲಾಗಿದೆ ಮತ್ತು 950 ಅರ್ಜಿಗಳನ್ನು ಕೈಯಿಂದ ನೇರವಾಗಿ ಸ್ವೀಕರಿಸಲಾಗಿದೆ. ಈ ಅರ್ಜಿಗಳನ್ನು ಸಹ ನೋಂದಾಯಿಸಲಾಗುವುದು ಮತ್ತು ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾಗುವುದು.

cm janata darshan

ಸಿಎಂ ಸಿದ್ದರಾಮಯ್ಯ ಅವರು ದಿನವಿಡೀ ಅರ್ಜಿಗಳನ್ನು ಸ್ವೀಕರಿಸಿದರು , ಅವರು ಇತರ ಅಧಿಕಾರಿಗಳಂತೆ ಬಿಡುವು ಸಹ ತೆಗೆದುಕೊಳ್ಳಲಿಲ್ಲ ಮತ್ತು ಬಂದ ಎಲ್ಲಾ ಅರ್ಜಿಗಳ ವಿಲೇವಾರಿಗೆ ಗಡುವು ನೀಡಿದ್ದಾರೆ. ಸೋಮವಾರ ಜನತಾದರ್ಶನದಲ್ಲಿ 3,812 ಅರ್ಜಿಗಳು ಬಂದಿವೆ. ರಾಜ್ಯದ ನಾನಾ ಭಾಗಗಳಿಂದ ಇನ್ನೂ ಜನ ಬರುತ್ತಿದ್ದರು. ಕೂಡಲೇ ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದರು.ಮುಂದಿನ 15 ದಿನದೊಳಗೆ ಈ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು.ಮತ್ತೆ ಜನಸ್ಪಂದನ ಕಾರ್ಯಕ್ರಮ ನಡೆಯುವಾಗ ಇಷ್ಟೊಂದು ಅರ್ಜಿಗಳು ಬರಬಾರದು ಎಂದರು.

ಮೂರು ತಿಂಗಳಿಗೊಮ್ಮೆಯಾದರೂ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಜನರ ಎಲ್ಲ ಕುಂದುಕೊರತೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ವಾರದೊಳಗೆ ಉತ್ತರ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದು ಜನತಾದರ್ಶನವಲ್ಲ ಜನಸ್ಪಂದನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಜನತಾದರ್ಶನ ಬೇರೆ, ಜನಸ್ಪಂದನ. ಅನೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬಹುದು. ಕೆಲವು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗುವುದಿಲ್ಲ. ಕಾನೂನಿನ ಅವಕಾಶ ನೋಡಿ ಬಗೆಹರಿಸಿಕೊಳ್ಳಬೇಕು ಎಂದರು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಸ್ಯೆಯನ್ನು ಪರಿಹರಿಸದಿದ್ದರೆ, ಅದು ಬೆಳೆಯುತ್ತಲೇ ಇರುತ್ತದೆ. ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಅನೇಕರು ಕೆಲಸ ಕೇಳಿದ್ದಾರೆ. ಅಂಗವಿಕಲರಿಗೆ 4 ಸಾವಿರ ತ್ರಿಚಕ್ರ ವಾಹನ ನೀಡಲು ಸೂಚಿಸಿದ್ದೇನೆ ಎಂದರು.


ವಿಶೇಷವಾಗಿ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ಅಲ್ಲಿಗೆ ಪ್ರಯಾಣಿಸಬೇಕು. ಪೋಡಿ, ಪಹಣಿ, ಖಾತಾ ಅಂತ ಜನ ಬರಬೇಕಾ? ಡಿಸಿಗಳು ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಬೇಕು. ಪೊಲೀಸ್ ಠಾಣೆಗಳಿಗೆ ಎಸ್ಪಿ ಭೇಟಿ ನೀಡಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಇದನ್ನೂ ಸಹ ಓದಿ : RCB ಐಪಿಎಲ್ 2024: ಹರಾಜಿಗೆ ಮೊದಲು ಈ ಅಗ್ರ ಆಟಗಾರನನ್ನು ಕೈಬಿಟ್ಟ ಬಿಸಿಸಿಐ; RCB ಫಾನ್ಸ್‌ಗೆ ನಿರಾಸೆ.?

ಸಣ್ಣಪುಟ್ಟ ಸಮಸ್ಯೆಗಳಿಗೆ ಜನರು ಖರ್ಚು ಮಾಡಿ ಬೆಂಗಳೂರಿಗೆ ಅಲೆಯುವ ಅಗತ್ಯವಿಲ್ಲ. ಜನರು ಅಲೆದಾಡಿದರೆ, ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಅಧಿಕಾರಿಗಳು ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾನೂನಾತ್ಮಕ ರೂಪ ಇಲ್ಲದೇ ಇದ್ದರೆ ಸಮ್ಮತಿ ನೀಡಿ ಜನರಿಗೆ ಕಳುಹಿಸಿ ಎಂದು ಹೇಳಿದರು. ಜನರ ಕೆಲಸ ಮಾಡಲು ನಾವು ಹಣ ಪಡೆಯುತ್ತೇವೆ. ನಾವೆಲ್ಲ ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತೇವೆ. ಸೂಚ್ಯವಾಗಿ ಎಲ್ಲಾ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅಧಿಕಾರಿಗಳು ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾನೇ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಗಳಲ್ಲಿ ಹಲವು ಸಚಿವರು ಜನತಾದರ್ಶನ ಮಾಡುತ್ತಿಲ್ಲ ಎಂಬ ಆರೋಪವನ್ನು ಅಲ್ಲಗಳೆದ ಸಿದ್ದರಾಮಯ್ಯ, ಎಲ್ಲ ಸಚಿವರು ಜಿಲ್ಲಾ ಜನತಾ ದರ್ಶನ ಮಾಡುತ್ತಿದ್ದಾರೆ. ಆದರೆ ಅವರು ಇನ್ನೂ ವರದಿಯನ್ನು ನೀಡಿಲ್ಲ. ಯಾವ ಸಚಿವರು ಜನತಾದರ್ಶನ ಮಾಡುತ್ತಿಲ್ಲ ಗೊತ್ತಾ’ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. NDRF ಹಣ ಯಾರದ್ದು? ಇದು ನಮ್ಮದು. ನೀವು ನಮ್ಮ ಹಣವನ್ನು ಏಕೆ ಪಾವತಿಸುತ್ತಿಲ್ಲ? ನಮ್ಮ ರಾಜ್ಯದಿಂದ ಕೇಂದ್ರಕ್ಕೆ ನಾಲ್ಕು ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತಿದೆ. ಆದರೆ ನಮಗೆ ಬರುತ್ತಿರುವುದು ಕೇವಲ 50-60 ಸಾವಿರ ಕೋಟಿ ರೂ. ನಮ್ಮ ಪಾಲಿನ ಹಣ ಕೊಡದೆ ಕೇಂದ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದರು.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬಿಗ್ ಅಪ್ಡೇಟ್.! ಹಣ ಪಡೆಯದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ

ನೊಂದವರ ಅಳಲಿಗೆ ದನಿಯಾದ ಸಿಎಂ ಸಿದ್ದರಾಮಯ್ಯ!! ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ

ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ.!! ಸರ್ಕಾರದ ಹೊಸ ಪ್ಲಾನ್‌

Leave a Comment