ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಜ್ಯೋತಿ ಯೊಜನೆಯಲ್ಲಿ ವಿದ್ಯುತ್ ಬಿಲ್ 200 ಯೂನಿಟ್ ವರೆಗೆ ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ಗೃಹಜ್ಯೋತಿ ಯೋಜನೆಯಲ್ಲಿ ಮತ್ತೆ ಹೊಸ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಗೃಹಜ್ಯೋತಿ ನಿಯಮದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಈ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್ ನೀಡುವ ಮಾನದಂಡವನ್ನು 10 ಯೂನಿಟ್ ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ. ಈ ಕುರಿತು ವಿವರವಾದ
ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದ್ದು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಲಾಗಿತ್ತು. ಇದರ ಅನುಸಾರ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಎಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ನೊಳಗೆ ಉಪಯೋಗಿಸುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಸಮ್ಮತಿ ಸೂಚಿಸಿದೆ ಎಂದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಸಹ ಓದಿ: ರಾಮ ಮಂದಿರ ಉದ್ಘಾಟನೆ ಪ್ರಯುಕ್ತ, ಜನವರಿ 22 ರಂದು ಎಲ್ಲಾ ಶಾಲೆಗಳಿಗೆ ರಜೆ ಆದೇಶ
ಒಬ್ಬ ಗ್ರಾಹಕ ಸರಾಸರಿಯಾಗಿ 43 ಯೂನಿಟ್ ವಿದ್ಯುತ್ ಬಳಸಿದರೆ ಹಳೆ ನಿಯಮದ ಪ್ರಕಾರ, ಅದಕ್ಕೆ 10% ಹೆಚ್ಚುವರಿಯಾಗಿ ರಿಯಾಯಿತಿಯನ್ನು ನೀಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಆಗ ಆತನು 4.8 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ಬಳಸಬಹುದಾಗಿತ್ತು . ಆದರೆ ಇದೀಗ ಶೇ. 10ಕ್ಕೆ ಬದಲಾಗಿ 10 ಯೂನಿಟ್ ಮಾಡಲಾಗಿದ್ದು, 43 ಯೂನಿಟ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಇನ್ನು ಮುಂದೆ 53 ಯೂನಿಟ್ ಸಿಗಲಿದೆ. ಮುಂದಿನ ತಿಂಗಳ ಬಿಲ್‌ನಿಂದಲೇ ಹೊಸ ನಿಯಮ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ನಡುವೆ, ಹೆಚ್ಚು ಯೂನಿಟ್ ಗಳನ್ನು ಬಳಸುವವರಿಂದ ಕೆಲವು ಯೂನಿಟ್ ಗಳನ್ನು ಕಡಿತ ಮಾಡಿ, ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ
ಗ್ರಾಹಕರು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರು ಕೊಂಚ ನಷ್ಟ ಎದುರಿಸಬೇಕಾಗುತ್ತದೆ. ಅಂದರೆ, ಗ್ರಾಹಕನೊಬ್ಬ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಅನುಸಾರ, 10% ಸೇರಿಸಿ ಉಚಿತ ನೀಡುವ ಹಿನ್ನೆಲೆ 165 ಯೂನಿಟ್ ವಿದ್ಯುತ್ ಬಳಕೆಗೆ ಅವಕಾಶವಿತ್ತು. ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್ ನೀಡುತ್ತಿರುವ ಹಿನ್ನೆಲೆ 160 ಯೂನಿಟ್ ಬಳಕೆ ಮಾಡಬಹುದುದಾಗಿದೆ. ಹೀಗಾಗಿ, 5 ಯೂನಿಟ್ ಹೆಚ್ಚುವರಿಯಾಗಿ ಬಳಕೆ ಮಾಡುವ ಅವಕಾಶ ಸಿಗದು.
ಇತರೆ ವಿಷಯಗಳು:
ಶ್ರೀರಾಮ ಮಂದಿರ ಫೋಟೋ ಇರೋ 500 ರ ನೋಟು ! ನಿಮಗೂ ಬೇಕಿದ್ದರೆ ಕ್ಲಿಕ್ ಮಾಡಿ
PUC ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಎರಡು ದಿನ ಬಾಕಿ