rtgh

ಪಡಿತರ ಚೀಟಿದಾರರಿಗೆ ಬಂಪರ್‌ ಆಫರ್.!!‌ ರೇಷನ್‌ ಕಾರ್ಡ್‌ನಲ್ಲಿ ಡಿಲೀಟ್‌ ಆದ ಹೆಸರನ್ನು ಮತ್ತೆ ಹೀಗೆ ಸೇರಿಸಿ

ಹಲೋ ಸ್ನೇಹಿತರೇ, ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವವರು ಸರ್ಕಾರದ ಉಚಿತ ಯೋಜನೆಯ ಪ್ರಯೋಜನ ಪಡೆಯಬಹುದು.

bpl card name add

ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಹಿಡಿದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವರೆಗೆ ರೇಷನ್ ಕಾರ್ಡ್ ಬಹಳ ಪ್ರಮುಖವಾಗಿರುವ ದಾಖಲೆ ಎನಿಸಿದೆ.

ಬಡ ವರ್ಗದವರು, ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ. ಇನ್ನೂ ಬಡವರಿಗೆ ಅನುಕೂಲವಾಗಲು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಕೂಡ ಇದ್ರೆ ಆ ಕುಟುಂಬಕ್ಕೆ ಹೆಚ್ಚಿನ ಪಡಿತರ ಕೂಡ ಸಿಗುತ್ತದೆ.

ಡಿಲೀಟ್ ಆದ ಹೆಸರನ್ನು ತಕ್ಷಣ ಸೇರಿಸಿಕೊಳ್ಳಿ

ಒಂದು ವೇಳೆ ಯಾವುದಾದ್ರೂ ತಾಂತ್ರಿಕ ದೋಷ ದಿಂದ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರ ಹೆಸರು ಸೇರಿಕೊಳ್ಳದೆ ಇದ್ದರೆ ಅಥವಾ ಇದ್ದ ಹೆಸರು ಡಿಲೀಟ್ ಆಗಿದ್ದರೆ ನೀವು ಅದನ್ನು ಪುನಃ ಸೇರಿಸಿಕೊಳ್ಳಲು ಅವಕಾಶವಿದೆ


ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲ್ಲಿಯೇ ರೇಷನ್ ಕಾರ್ಡ್ ನಲ್ಲಿ ತಪ್ಪಿ ಹೋಗಿರುವ ಹೆಸರುಗಳನ್ನು ಸೇರಿಸಿಕೊಳ್ಳಲು ಸಾಧ್ಯವಿದೆ. ಅದು ಹೇಗೆ ನೋಡೋಣ?

RTO ಹೊಸ ನಿಯಮ: ಇನ್ಮುಂದೆ ಚಾಲಕರು ಈ ನಿಯಮ ಪಾಲಿಸಲೇಬೇಕು

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ. ಮುಖ್ಯವಾಗಿ ನಿಮ್ಮ ಪಡಿತರ ಚೀಟಿ ಆಧಾರ್ ಕಾರ್ಡ್ ಹಾಗೂ ವಿಳಾಸ ಪುರಾವೆ ನೀಡುವಂತಹ ವಾಹನ ಚಾಲನಾ ಪರವಾನಗಿ, ವೋಟರ್ ಐಡಿ ಪಾನ್ ಕಾರ್ಡ್ ಯಾವುದೇ ಒಂದು ಗುರುತಿನ ಚೀಟಿ ಒದಗಿಸಬೇಕು.

ಆನ್ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಿ

ರೇಷನ್ ಕಾರ್ಡ್ ನಲ್ಲಿ ಆನ್ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://epds.nic.in/ ಭೇಟಿ ನೀಡಿ.

ಮುಖಪುಟದಲ್ಲಿ ರೇಷನ್ ಕಾರ್ಡ್ ಕರೆಕ್ಷನ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ ನಿಮ್ಮ ಪಡಿತರ ಚೀಟಿ ಹಾಗೂ ಆಧಾರ್ ಸಂಖ್ಯೆ ಎರಡನ್ನು ನಮೂದಿಸಬೇಕು.

ಈಗ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ. ರೇಷನ್ ಕಾರ್ಡ್ ಎಲ್ಲಾ ಮಾಹಿತಿಯು ಲಭ್ಯವಾಗುತ್ತದೆ. ನಂತರ ಹೆಸರು ನವೀಕರಣಕ್ಕೆ ಇಲ್ಲಿ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಅಗತ್ಯ ಇರುವ ಹೆಸರು ಸೇರ್ಪಡೆ ಮಾಡಿದ ನಂತರ ಸಬ್ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ರೀತಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮರೆಯಾದ ಅಥವಾ ಡಿಲೀಟ್ ಆಗಿರುವ ಹೆಸರನ್ನು ಸೇರ್ಪಡೆ ಮಾಡಬಹುದು. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡಲು ಕೂಡ ಅವಕಾಶವಿದೆ ಹಾಗಾಗಿ ನೀವು ಹೆಸರು ಸೇರ್ಪಡೆ ಮಾಡಿದ ನಂತರ ಸ್ಟೇಟಸ್ ಚೆಕ್ ಮಾಡಬಹುದು.

ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹3000!! ಭತ್ಯೆ ಜಮಾ ಕಾರ್ಯ ಆರಂಭ

ದಿಢೀರ್‌ ಇಳಿಕೆ ಕಂಡ ಚಿನ್ನದ ಬೆಲೆ.!! ಹಾಗಾದ್ರೆ ಸದ್ಯದ ಮೌಲ್ಯ ಎಷ್ಟು ಗೊತ್ತಾ??

Leave a Comment