rtgh

Bigg Boss Kannada: ಮದುವೆಯ ಬಗ್ಗೆ ಅಸಲಿ ಕಥೆ ಬಿಚ್ಚಿಟ್ಟ‌ ಹಳ್ಳಿಕಾರ್‌ ಒಡೆಯ ವರ್ತೂರ್ ಸಂತೋಷ್

ಹಲೋ ಸ್ನೇಹಿತರೇ, ಬಿಗ್‌ ಬಾಸ್‌ ಸೀಸನ್‌ 10 ಆರಂಭವಾದಾಗಿನಿಂದ ಸಾಕಷ್ಟು ಸುದ್ದಿ ಮಾಡಿರುವುದು ವರ್ತೂರ್‌ ಸಂತೋಷ್‌, ಇವರಿಗೆ ಮದುವೆಯಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗೊಂದಲ ಮತ್ತು ಚರ್ಚೆಗೆ ಒಳಗಾಗಿತ್ತು. ಈಗ ಈ ವಿಚಾರವಾಗಿ ವರ್ತೂರ್‌ ಸಂತೋಷ್‌ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ, ಏನು ಮಾತನಾಡಿದ್ದಾರೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

BBK 10

ಬಿಗ್‌ ಬಾಸ್‌ ಸೀಸನ್‌ 10 ಆರಂಭವಾದಾಗಿನಿಂದ ಸಾಕಷ್ಟು ಸುದ್ದಿ ಮಾಡಿರುವುದು ವರ್ತೂರ್‌ ಸಂತೋಷ್‌, ಮೊದಲನೆಯದು ಹುಲಿ ಉಗುರಿಗೆ ಸಂಬಂಧಿಸಿದ ವಿವಾದಕ್ಕೆ ಒಳಗಾಗಿದ್ದರು ಇದರಿಂದ ಜೈಲಿಗು ಕೂಡ ಹೋಗಿ ಬಂದರು. ಇದರ ಬಳಿಕ ಅವರಿಗೆ ಮದುವೆಯಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗೊಂದಲ ಮತ್ತು ಚರ್ಚೆಗೆ ಒಳಗಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಸಂತೋಷ್‌ರವರು ವೈವಾಹಿಕ ಜೀವನದ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ.

ಯಾರಿಗೆ ತಾಳಿ ಕಟ್ಟು ಅನ್ನುತ್ತೀರೋ ಅವರಿಗೆ ತಾಳಿ ಕಟ್ಟುತ್ತೇನೆ ಎಂದು ಪೋಷಕರಿಗೆ ಮಾತು ಕೊಟ್ಟಿದ್ದೆ, ಅದರಂತೆಯೇ ಮಾದುವೆಯೂ ಕೂಡ ಆದೆ, ಆದರೆ ಮದುವೆಯಾದ ಬಳಿಕ ಅಮ್ಮ ಮತ್ತು ನಾನು ಪ್ರೀತಿಸುವ ಜನರನ್ನು ದೂರವಿಡಬೇಕಾಯಿತು. ವೈವಾಹಿಕ ಜೀವನದಲ್ಲಿ ಕಲಹಗಳು ಉಂಟಾಯಿತು. ಈಗಲು ಬಂದರೆ ನೀನು ರಾಣಿಯೇ ಎಂದಿದ್ದೆ ಅಂದು ನಾನು ಕೊಟ್ಟ ಮಾತಿಗೆ ಇಂದಿಗೂ ಕೂಡ ಬದ್ದನಾಗಿದ್ದೇನೆ ಎಂದು ಸಂತೋಷ್‌ ಮದುವೆಯ ಬಗ್ಗೆ ಸತ್ಯಗಳನ್ನು ಎಲ್ಲರಲ್ಲಿ ಹಂಚಿಕೊಂಡಿದ್ದಾರೆ.


ಬಿಗ್‌ ಬಾಸ್‌ ಜಿಯೋ ಸಿನಿಮಾದಲ್ಲಿ 24 ಗಂಟೆಯಾ ನೇರ ಪ್ರಸಾರವಾಗುತ್ತದೆ ಅದರಲ್ಲಿ ವರ್ತೂರ್‌ ಸಂತೋಷ್‌ ಅವರು ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ತನ್ನ ಪತ್ನಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಈಗ ಗ್ಯಾಸ್ ಸಿಲಿಂಡರ್ ಖರೀದಿಸುವ ಮುನ್ನ ಈ ದಾಖಲೆ ಹೊಂದಿರುವುದು ಕಡ್ಡಾಯ!! ಸರ್ಕಾರದಿಂದ ಬಿಗ್‌ ಅಪ್ಡೇಟ್

ಗೃಹಲಕ್ಷ್ಮಿಯರಿಗೆ ಸರ್ಕಾರದ ಗಿಫ್ಟ್.!!!‌ ಇವರ ಖಾತೆಗೆ ಬಂದಿದೆ 2000 ರೂ.; ನೀವು ಒಮ್ಮೆ ಚೆಕ್‌ ಮಾಡಿ

Leave a Comment