ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ… ದೀಪಾವಳಿ ಹಬ್ಬದಲ್ಲಿ ಶಾಪಿಂಗ್ ಭರಾಟೆ ಜೋರಾಗಿಯೇ ಇರುತ್ತದೆ. ಆನ್ಲೈನ್ ಶಾಪಿಂಗ್ ಪ್ಲಾರ್ಟ್ ಫಾರ್ಮ್ ಗಳಲ್ಲಿ ಭರ್ಜರಿ ಆಫರ್ ಹಾಗೂ ಡಿಸ್ಕೌಂಟ್‌ಗಳು ಜೋರಾಗಿಯೇ ಇರುತ್ತದೆ. ಹಬ್ಬದ ಸಮಯದಲ್ಲಿ ಇಂತಹ ಆಫರ್ ಗಳಿಗಾಗಿ ಕಾಯುವಂತಹ ಎಷ್ಟೋ ಜನರಿದ್ದಾರೆ. ಅಂತಹ ಆಫರ್ ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ. ಕೊನೆಯವರೆಗೂ ಈ ಲೇಖನವನ್ನು ಓದಿ.
ಕಡಿಮೆ ಬೆಲೆಯಲ್ಲಿ ಮೊಬೈಲ್ , ಪ್ರಿಜ್ ನಂತಹ ವಸ್ತುಗಳನ್ನು ಈ ಸಂದರ್ಭಗಳಲ್ಲಿ ಖರೀದಿಸಬಹುದು. ಆದರೆ ಹಲವಾರು ಭಾರೀ ರಿಯಾಯಿತಿಯನ್ನು ಪಡೆದ ನಂತರವೂ ಕೂಡ ಬಹಳಷ್ಟು ಗ್ರಾಹಕರು ಮೋಸಕ್ಕೆ ಒಳಗಾಗುತ್ತಾರೆ. ಈ ವಂಚನೆಯಿಂದ ಪಾರಾಗುವುದಕ್ಕೆ ಆನ್ಲೈನ್ ಶಾಪಿಂಗ್ ಮಾಡುವಾಗ ಹಲವಾರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ನೀವು ನಂಬಿಕೆಗೆ ಅರ್ಹವಾದಂತಹ ವೆಬ್‌ಸೈಟ್‌ಗಳನ್ನೇ ಆಯ್ದುಕೊಳ್ಳಬೇಕು. ಯಾವುದೇ ವೆಬ್‌ಸೈಟ್‌ಗಳಿಂದ ಏನನ್ನಾದರೂ ಖರೀದಿಸುವ ಮೊದಲು ನೀವು ಆ ವಸ್ತುಗಳು ಯಾವ ರೀತಿಯ ವೆಬ್‌ಸೈಟ್ ನಿಂದ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಮೊದಲು ಪರಿಶೀಲಿಸಬೇಕು.
ಇದನ್ನು ಸಹ ಓದಿ: ಪಡಿತರ ಚೀಟಿದಾರರಿಗೆ ಪ್ರಧಾನಿ ಮೋದಿ ಘೋಷಣೆ..! 80 ಕೋಟಿ ಜನರಿಗೆ ಉಚಿತ ಪಡಿತರ ಮುಂದಿನ 5 ವರ್ಷಗಳವರೆಗೆ ವಿಸ್ತರಣೆ
ವಿವಿಧ ವೆಬ್‌ಸೈಟ್‌ಗಳಲ್ಲಿ ಒಂದೇ ವಸ್ತುವಿನ ಬೆಲೆ ಭಿನ್ನವಾಗಿರಬಹುದು. ಆದ್ದರಿಂದ ಖರೀದಿಸುವ ಮೊದಲು ನೀವು ಬೆಲೆಗಳನ್ನು ಹೋಲಿಸಬೇಕು. ನೀವು ಖರೀದಿಸುವಂತಹ ವಸ್ತುಗಳು ಇನ್ನೊಂದು ಪೋರ್ಟಲ್‌ನಲ್ಲಿ ಕಡಿಮೆ ಬೆಲೆಗೆ ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೊದಲು ನೀವು ಯಾವುದೇ ವಸ್ತುಗಳು ಅಗತ್ಯಕ್ಕಿಂತ ಹೆಚ್ಚು ಆಕರ್ಷಕವಾಗಿ ಕಂಡುಬಂದಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು. ಏಕೆಂದರೆ ಯಾವುದೂ ಕೂಡ ಉಚಿತವಾಗಿ ಸಿಗುವುದಿಲ್ಲ. ಆದ್ದರಿಂದ ಆನ್‌ಲೈನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯಿದ್ದರೆ ಆ ವಸ್ತು ಹೆಚ್ಚಿನದಾಗಿ ನಕಲಿ ವಸ್ತವಾಗಿಯೇ ಇರುತ್ತದೆ.
ಕ್ರೆಡಿಟ್ ಕಾರ್ಡ್ or ಡೆಬಿಟ್ ಕಾರ್ಡ್ ಗಳನ್ನು ಬಳಸುವುದು ಆನ್‌ಲೈನ್ ಶಾಪಿಂಗ್‌ನ ಮಾಡುವಾಗ ಸುಲಭ ಮಾರ್ಗವಾಗಿದೆ. ಆದರೆ ಹಣ ಪಾವತಿಗೂ ಮುನ್ನ ಆ ಮಾರ್ಗ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿಯಬೇಕು.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಆ ವಸ್ತುವಿಗೆ ಗ್ರಾಹಕರು ಕೊಟ್ಟಂತಹ ರಿವ್ಯೂಗಳನ್ನು ಪರಿಶೀಲಿಸುವುದು ಅವಶ್ಯಕವಾಗಿರುತ್ತದೆ.
ಇತರೆ ವಿಷಯಗಳು:
ಅಂತೂ ಬರ ಪರಿಹಾರ ಹಣ ಬಿಡುಗಡೆ: 216 ತಾಲ್ಲೂಕುಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ವಿದ್ಯಾವಂತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸಿಎಂ..! ಈ ದಿನ ಯುವನಿಧಿ ಯೋಜನೆ ಪ್ರಾರಂಭಕ್ಕೆ ಮೂಹೂರ್ತ ಫಿಕ್ಸ್