ಅನ್ನಭಾಗ್ಯಕ್ಕೆ ಈಗ ಕೇಂದ್ರದಿಂದ ಹೊಸ ಬಿಲ್ ಜಾರಿ. ಅಕ್ಕಿ ನೀಡುತ್ತಾ ಇರುವುದು ಮೋದಿ ಸರ್ಕಾರ ಎಂದು ತಿಳಿಯಲು ಸರ್ಕಾರ ಪಯತ್ನ ನೆಡೆಸುತ್ತಿದೆ. ಅನ್ನಭಾಗ್ಯ ಯೋಜನೆ ಈ ಬಾರಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರೋ ಪಂಚ ಗ್ಯಾರೆಂಟಿಗಳಲ್ಲಿ ಒಂದು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಸದ್ಯ 5 ಕೆಜಿ ಅಕ್ಕಿಯಷ್ಟೇ ನೀಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿಗೆ ಹಣ ಪಾವತಿಸಲಾಗುತ್ತಿದೆ.
10 ಕೆಜಿ ಅಕ್ಕಿ ಕೊಡಲಾಗದ ರಾಜ್ಯ ಸರ್ಕಾರ ಉಳಿದ 5 ಕೆಜಿ ಗೆ ಹಣ ನೀಡುತ್ತಾ ಇದೆ. ಆದರೆ ಈ ವಿಚಾರವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ ಈಗ ಕೊಡುತ್ತಾ ಇರುವ ಅಕ್ಕಿ ರಾಜ್ಯ ಸರ್ಕಾರದಲ್ಲ ಮೋದಿ ಸರ್ಕಾರದ್ದು ಎಂದು ಬಿಂಬಿಸುವುದಕ್ಕೆ ಹೊಸ ಬಿಲ್ ಸಿಸ್ಟಮ್ ಜಾರಿಗೆ ತಂದಿದೆ.
ಪ್ರಸ್ತುತ ನೀಡುತ್ತಿರುವ ಅಕ್ಕಿ ಬಿಜೆಪಿಯದ್ದು ಮೋದಿ ಸರ್ಕಾರದ್ದು ಆದರೆ ತನ್ನ ಲೇಬಲ್ ಹಾಕಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಕೊಟ್ಟ ಮಾತಿನಂತೆ ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡಲು ವಿಫಲವಾಗಿದೆ ಎಂದು ಬಿಜೆಪಿ ಕಿಡಿಕಾರುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಲು ಹೊಸ ತಂತ್ರವನ್ನು ಹೂಡಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಇದನ್ನು ಸಹ ಓದಿ: ರೈತರಿಗೆ ಹೊಡಿತು ಲಾಟ್ರಿ: ಪಶುಪಾಲನೆಗೆ ಸರ್ಕಾರದಿಂದ 10 ಲಕ್ಷ ಉಚಿತ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸುವ ಲಿಂಕ್
ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಬಿಲ್ನಲ್ಲಿ ಮುದ್ರಣ ಮಾಡಲಾಗಿದೆ. ರಾಜ್ಯ ಗ್ರಾಹಕರಿಗೆ ಯಾವ ಸರ್ಕಾರ ಎಷ್ಟು ಅಕ್ಕಿ ಕೊಡುತ್ತಿದೆ. ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ ಅನುದಾನ ಎಷ್ಟು ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ ಅನುದಾನ ಎಷ್ಟು ಎಂಧು ಹೊಸ ಬಿಲ್ ನಲ್ಲಿ ವಿವರವಾಗಿ ಕೇಂದ್ರ ಸರ್ಕಾರ ಮುದ್ರಿಸಿದೆ. ಇನ್ನೂ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಅಕ್ಕಿ ರಾಗಿ ಎಷ್ಟು ಕೆಜಿ ರಾಗಿ ಅಥವಾ ಜೋಳ ಎಷ್ಟು ಕೆಜಿ ವಿತರಣೆ ಅನ್ನೋ ಮಾಹಿತಿಯನ್ನು ಬಿಲ್ ನಲ್ಲಿ ನಮೂದಿಸೋ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅದಕ್ಕೆ ತಗಲುವ ಮೊತ್ತವೆಷ್ಟು ಅದಕ್ಕೆ ಅನುದಾನ ಎಲ್ಲಿಂದ ಬಂದಿದೆ ಯಾವ ರೀತಿ ಗ್ರಾಹಕರಿಗೆ ತಲುಪಿದೆ ಅನ್ನುವುದರ ಮಾಹಿತಿ ಬಿಲ್ ನಲ್ಲಿ ಇರಲಿದೆ.
ಕೇಂದ್ರ ಸರ್ಕಾರದ ಹೊಸ ಬಿಲ್ ಪಾವತಿಯನ್ನು ಬಿಜೆಪಿ ನಾಯಕರು ಸ್ವಾಗತಿಸಿದರೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ದುಡ್ಡು ನಮ್ಮ ರಾಜ್ಯದ್ದೇ ನಮಗೆ ಕೊಡದೇ ಅಮೇರಿಕಾಗೆ ಕೊಡಲು ಆಗತ್ತಾ ಎಂದು ಗುಡುಗಿದ್ದಾರೆ. ಗ್ಯಾರೆಂಟಿಯನ್ನು ತಳಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಲು ಕಾಂಗ್ರೆಸ್ ಅಭಿಯಾನ ಕೈಗೊಂಡಿದೆ. ಆದರೆ ಇತ್ತಾ ಬಿಜೆಪಿ ಕಾಂಗ್ರೆಸ್ ನ ವೈಪಲ್ಯಗಳನ್ನು ಬಿಂಬಿಸಲು ತಂತ್ರ ಹೂಡಿದೆ.
ಇತರೆ ವಿಷಯಗಳು:
ಸಿದ್ದರಾಮಯ್ಯನವರ ಸ್ಥಿತಿ ಅದೋಗತಿ!! ಬರ ಪರಿಹಾರಕ್ಕೆ ಒಂದು ಪೈಸೆಯೂ ನೀಡದ ಕೇಂದ್ರ
ಮುಂಬರುವ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೊಸ ಅಪ್ಡೇಟ್..! KEA ವತಿಯಿಂದ ಹೊಸ ನಿಯಮ ಜಾರಿ