rtgh

ರೇಷನ್‌ ಕಾರ್ಡ್‌ದಾರರಿಗೆ ರಾಜಯೋಗ.!! ಈ ದಾಖಲೆ ಇದ್ದವರಿಗೆ ಸಿಗುತ್ತೆ ₹10 ಲಕ್ಷ

ಹಲೋ ಸ್ನೇಹಿತರೇ, ಬಿಪಿಎಲ್ ಕಾರ್ಡ್ ಹೊಂದಿರುವ ಬಡ ವರ್ಗದ ಜನರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಸಾಕಷ್ಟು ಬಡ ಜನರು ಉಚಿತವಾಗಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿದೆ.

Ayushman Bharat Card
ಆಯುಷ್ಮಾನ್ ಭಾರತ್ ಕಾರ್ಡ್

ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇಂದ್ರ ಸರ್ಕಾರ 2018ರಲ್ಲಿ ಆರಂಭಿಸಿತ್ತು. ಯೋಜನೆಗಾಗಿ ಸಾಕಷ್ಟು ಕೋಟಿ ಹಣ ಮೀಸಲಿಟ್ಟಿರುವ ಸರ್ಕಾರ, ಈಗ ಇದರಿಂದ ಸಿಗುವ ಸೌಲಭ್ಯದ ನೀತಿಯನ್ನು ಹೆಚ್ಚಿಸಿದೆ.

ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳವರೆಗೆ, ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಈಗ ಈ ಮಿತಿಯನ್ನು 10 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಆಯುಷ್ಮಾನ್ ಕಾರ್ಡ್ ಹೊಂದಿರುವ ಕುಟುಂಬದವರು ಆಯ್ದ ಅಥವಾ ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೆಕೆಂಡರಿ ಮತ್ತು ದ್ವಿತೀಯ ದರ್ಜೆಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅವಕಾಶವಿದೆ.


ಇದಕ್ಕಾಗಿ 2024ರ ಕೇಂದ್ರ ಬಜೆಟ್ ನಲ್ಲಿ 7,200 ಕೋಟಿಗಳನ್ನು ರೂಪಾಯಿಗಳನ್ನು ಮೀಸಲಿಡಲಾಗಿತ್ತು. 2025ರ ವೇಳೆಗೆ ಈ ಮೊತ್ತವನ್ನು 15,000 ಕೋಟಿಗೆ ಹೆಚ್ಚಿಸಲು ಸರ್ಕಾರವು ನಿರ್ಧರಿಸಿದೆ. ಅಂದ್ರೆ ಈ ಯೋಜನೆಯಿಂದ ಸಿಗುವ ಪ್ರಯೋಜನ ದುಪ್ಪಟ್ಟಾಗಲಿದೆ. ಆಯುಷ್ಮಾನ್ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಶೇಕಡ 66 ವರೆಗೆ ಸಹಾಯಧನ ಸಿಕ್ಕರೆ 34% ನಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ.

ಬರ ಘೋಷಣೆ ಮಾಡಿದ ತಾಲೂಕಿನ ರೈತರ ಖಾತೆಗೆ ₹21,700 ಜಮಾ! ಸಿಎಂ ಮಹತ್ವದ ಘೋಷಣೆ

ಆಯುಷ್ಮಾನ್ ಕಾರ್ಡ್ ಪ್ರಯೋಜನ

ಬಡವರಿಗೆ ಕಾಯಿಲೆಗಳು ಬಂದಾಗ ಅದರಲ್ಲೂ ಆಪರೇಷನ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಾಗ ಅದಕ್ಕೆ ಬೇಕಾಗಿರುವಷ್ಟು ಹಣವನ್ನು ಹೊಂದಿಸುವುದು ಕಷ್ಟವಾಗುತ್ತದೆ, ಇದೇ ಕಾರಣಕ್ಕೆ ಸರ್ಕಾರ ಆಯುಷ್ಮಾನ್ ಯೋಜನೆಯನ್ನು ಪರಿಚಯಿಸಿದ್ದು.

ಈ ಯೋಜನೆಯ ಅಡಿಯಲ್ಲಿ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿದೆ. ಇನ್ನು ಮುಂದೆ 10 ಲಕ್ಷ ರೂಪಾಯಿಗಳ ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಕ್ಯಾನ್ಸರ್, ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಮೊದಲಾದ ಶಸ್ತ್ರ ಚಿಕಿತ್ಸೆಗಾಗಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಆಯುಷ್ಮಾನ್ ಕಾರ್ಡ್ ಗಾಗಿ ಅಪ್ಲೈ ಮಾಡುವುದು ಹೇಗೆ?

ದೇಶಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿರುವ, ಸುಮಾರು 30 ಕೋಟಿ ಜನ ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ. ನೀವು ಕೂಡ ಫಲಾನುಭವಿಗಳಾಗಿದ್ದರೆ ಆಯುಷ್ಮಾನ್ ಭಾರತ್ ಅಧಿಕೃತ ವೆಬ್ಸೈಟ್ನಲ್ಲಿ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು.

PUC ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಎರಡು ದಿನ ಬಾಕಿ

ಕೋಚಿಂಗ್ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ; ಈ ವಿದ್ಯಾರ್ಥಿಗಳನ್ನು ದಾಖಲು ಮಾಡುವಂತಿಲ್ಲ!

Leave a Comment