rtgh

ಅನ್ನಭಾಗ್ಯಕ್ಕೆ ಬಿತ್ತು ಬ್ರೇಕ್.!‌ 3 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರಿಗೆ ಈ ತಿಂಗಳಿನಿಂದ ಹಣ ಇಲ್ಲ.!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅನ್ನಬಾಗ್ಯ ಯೋಜನೆಯು ಒಂದು. ಈ ಯೋಜನೆಯಲ್ಲಿ ಪ್ರತಿ ತಿಂಗಳು ಮನೆಯ ಪ್ರತಿಯೊಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗದ ಕಾರಣ 5 ಕೆ.ಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಯ ಬದಲು ಹಣ ನೀಡುತ್ತಿದೆ. ಆದರೆ ಈಗ 3 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರಿಗೆ ಈ ತಿಂಗಳಿನಿಂದ ಹಣ ಸಿಗುವುದಿಲ್ಲ. ಕಾರಣ ಏನು ಗೊತ್ತಾ? ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Anna Bhagya Yojana Money

ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಜನರು ಮತ್ತು ಸರ್ಕಾರ ಇಬ್ಬರೂ ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಪಡಿತರ ಸಿಗದ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದ್ದು, ಪಡಿತರ, ಅನ್ನ ಭಾಗ್ಯ ಯೋಜನೆಯ ಹಣ ಸೇರಿದಂತೆ 3 ಲಕ್ಷಕ್ಕೂ ಅಧಿಕ ಕುಟುಂಬಗಳು ಕಡಿತಗೊಳ್ಳುವ ಭೀತಿ ಎದುರಾಗಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ವಿತರಣಾ ಕೇಂದ್ರಗಳಿಂದ ಪಡಿತರ ಸಂಗ್ರಹಿಸದ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ 1,16,95,029 ಬಿಪಿಎಲ್ ಕಾರ್ಡ್ ದಾರರಿದ್ದಾರೆ. 3.26 ಲಕ್ಷ ಕಾರ್ಡ್‌ದಾರರಿಗೆ ಆರು ತಿಂಗಳಿಂದ ಪಡಿತರ ಸಿಕ್ಕಿಲ್ಲ.

ಪಡಿತರ ಚೀಟಿ ರಹಿತ ರದ್ದತಿಯಿಂದ ಸರ್ಕಾರಕ್ಕೆ ತಿಂಗಳಿಗೆ 5 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಪಡಿತರ ಚೀಟಿ ಬಳಸದೇ ಇರುವವರಿಗೆ ಯಾವುದೇ ಮುನ್ಸೂಚನೆ ನೀಡದೆ ಪಡಿತರ ಚೀಟಿ ರದ್ದುಪಡಿಸಲು ಸರ್ಕಾರ ಚಿಂತನೆ ನಡೆಸಿದೆ. 6 ತಿಂಗಳಿಂದ ಪಡಿತರ ಸಿಗುತ್ತಿಲ್ಲ ಎಂದು ಆಹಾರ ಇಲಾಖೆ ತಿಳಿಸಿದ್ದು, ಅಂತಹ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.


ಇದನ್ನೂ ಸಹ ಓದಿ: ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣ ಬಿಜೆಪಿ ನಾಯಕರಿಗೆ ಸೇರಿದ್ದು: ಡಿ.ಕೆ ಶಿವಕುಮಾರ್

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಯಾವುದೇ ನೋಟಿಸ್‌ ನೀಡದೆ ರೇಷನ್ ಕಾರ್ಡ್‌ ಗಳನ್ನು ರದ್ದುಪಡಿಸಲು ಇಲಾಖೆ ಕಸರತ್ತು ನಡೆಸುತ್ತಿದೆ. ಕರ್ನಾಟಕ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು.

ಆದರೆ ಸಾಕಷ್ಟು ಅಕ್ಕಿ ಪೂರೈಕೆಯಾಗದ ಕಾರಣ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆ ಜೂ.10ರಿಂದ ಜಾರಿಯಾಗಿದ್ದು, ಈ ಸೌಲಭ್ಯ ಪಡೆಯಲು ಕಾರ್ಡ್ ಹೊಂದಿರುವ ಕುಟುಂಬಗಳು ಮೂರು ತಿಂಗಳಿಗೊಮ್ಮೆಯಾದರೂ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಬೇಕು. ಇಲ್ಲದಿದ್ದರೆ, ಯಾವುದೇ ಹಣವನ್ನು ಸ್ವೀಕರಿಸಲಾಗುವುದಿಲ್ಲ. ಸರ್ಕಾರ ಈ ಪಡಿತರ ಚೀಟಿಯನ್ನು ರದ್ದುಗೊಳಿಸಿದರೆ 3 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಈ ತಿಂಗಳಿನಿಂದ ಅನ್ನಭಾಗ್ಯ ಧನ ಸಿಗುವುದಿಲ್ಲ. ಪಡಿತರ ಪಡೆಯದ ಅಂದಾಜು 8 ಲಕ್ಷ ಬಿಪಿಎಲ್ ಕಾರ್ಡ್ ಕುಟುಂಬಗಳು ನೇರ ನಗದು ವ್ಯವಸ್ಥೆಯಿಂದ ವಂಚಿತವಾಗಿವೆ.

ಇತರೆ ವಿಷಯಗಳು:

ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌: ಪ್ರತಿ ತಿಂಗಳು 10000 ರೂ. ಎಲ್ಲ ಮಹಿಳೆಯರ ಖಾತೆಗೆ! ಸರ್ಕಾರದ ಮಹತ್ವದ ಘೋಷಣೆ

ವಿದ್ಯುತ್ ಮೇಲೆ ತೆರಿಗೆ ವಿಧಿಸಿದ ರಾಜ್ಯಗಳಿಗೆ ಎದುರಾಯ್ತು ಸಂಕಷ್ಟ! ಕೇಂದ್ರದಿಂದ ಖಡಕ್ ಎಚ್ಚರಿಕೆ

Leave a Comment