ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದ ಹಣ ಜಮಾ ಮಾಡಲು ನಿರ್ಧರಿಸಿದೆ. ಎರಡೂ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿ ಕುಟುಂಬದಲ್ಲಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ 2 ನೇ ಸದಸ್ಯರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅರ್ಹತೆ ಆಧರಿಸಿ ಸೂಕ್ತ ವ್ಯಕ್ತಿ ಗುರುತಿಸಲು ಸೂಚನೆ
ಅನ್ನಭಾಗ್ಯ ಯೋಜನೆಯಡಿ ಆಯಾ ಕುಟುಂಬದ ಮುಖ್ಯಸ್ಥರ ನಂತರ ಬರುವ ಅಥವಾ ಸ್ಥಾನಿಕವಾಗಿ ಲಭ್ಯವಾಗುವ ಅತ್ಯಂತ ಹಿರಿಯ ವ್ಯಕ್ತಿಗೆ ಆಧಾರ್, ಬ್ಯಾಂಕ್ ಖಾತೆ, ಪೋಸ್ಟಲ್ ಬ್ಯಾಂಕ್ ಖಾತೆ ಹಾಗೂ ಇತರೆ ಅರ್ಹತೆ ಆಧರಿಸಿ ಸೂಕ್ತರಾದವರನ್ನು ಗುರುತಿಸಿ ಡಿಬಿಟಿ ಮಾಡಲು ಒಪ್ಪಿಗೆ ನೀಡಲಾಗಿದೆ.
ಸದ್ಯ ಗೃಹಲಕ್ಷ್ಮಿ ಹಣ ಬಿಡುಗಡೆಯಾದರೂ ಸಾಕಷ್ಟು ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಇತ್ತ ಅನ್ನಭಾಗ್ಯ 5 ಕೆಜಿ ಬದಲಾಗಿ ಹಣ ನೀಡುವ ವ್ಯವಸ್ಥೆ ಮಾಡಿದ್ದರೂ ಸಾಕಷ್ಟು ಕುಟುಂಬಕ್ಕೆ ಹಣ ಜಮೆಯಾಗಿಲ್ಲ. ಇದಕ್ಕೆ ಆ ಮನೆಯ ಹಿರಿಯ ಸದಸ್ಯರ ಅಲಭ್ಯತೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆ ಗ್ಯಾರಂಟಿ ಯೋಜನೆಗಳು ಶೇ.100 ರಷ್ಟು ಗುರಿ ಸಾಧಿಸಿಲ್ಲ. ಹೀಗಾಗಿ, ಸರ್ಕಾರವು ಕುಟುಂಬ ಯಜಮಾನ ಲಭ್ಯವಿಲ್ಲದಿದ್ದರೆ ಪರ್ಯಾಯ ಮಾರ್ಗಕ್ಕೆ ಮುಂದಾಗಿದೆ.
ಇದನ್ನೂ ಸಹ ಓದಿ : ಪ್ರತಿ ಗ್ರಾಮೀಣ ಕುಟುಂಬದವರಿಗೂ ಬಂತು ಹೊಸ ಯೋಜನೆ!! ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ ಜಾರಿ
ಹೌದು, ರಾಜ್ಯ ಸರ್ಕಾರವು ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆ ಹಣವನ್ನು ಖಾತೆಗೆ ಜಮಾ ಮಾಡಲಿದೆ. ಫಲಾನುಭವಿಗಳು ತಪ್ಪದೇ ಎಲ್ಲಾ ದಾಖಲೆಗಳು ಸರಿಯಾಗಿದೆಯಾ ಎಂದು ಪರಿಶೀಲಿಸಿಕೊಳ್ಳಬೇಕು.
ರಾಜ್ಯದಲ್ಲಿ ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ಹಣ ಖಾತೆಗೆ ಜಮಾ ಆಗಿಲ್ಲ. ಈ ಫಲಾನುಭವಿಗಳ ರೇಷನ್ ಕಾರ್ಡ್ ಮನೆಯ ಹಿರಿಯ ಸದಸ್ಯರ ಅಕೌಂಟ್ ನಿಷ್ಕ್ರಿಯ ಆಧಾರ್ ಸೀಡಿಂಗ್ ಸಮಸ್ಯೆ, ಕೆವೈಸಿ ಸಮಸ್ಯೆ ಇತ್ತು. ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆಹಾಕಿದೆ. ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಮನೆಯ 2 ನೇ ಯಜಮಾನರ ಖಾತೆಗೆ ಹಣ ಪಾವತಿಯಾಗಲಿದೆ.
ಬಿಪಿಎಲ್ ಕಾರ್ಡ್ ದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್ ನ 2 ನೇ ಯಜಮಾನರ ಅಕೌಂಟ್ ಗೆ ಹಣ ಜಮಾ ಆಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ.
ಇತರೆ ವಿಷಯಗಳು:
ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವರು: ಅತಿ ಶೀಘ್ರವೇ ಸಾವಿರಾರು ಶಿಕ್ಷಕರ ನೇಮಕಾತಿ
ಪಿಎಂ ಸ್ವಾ ನಿಧಿ ಯೋಜನೆ 2023: ಯಾವುದೇ ಬಡ್ಡಿಯಿಲ್ಲದೇ ಉಚಿತ ಸಾಲ ಸೌಲಭ್ಯ!! ಅರ್ಜಿ ಪ್ರಕ್ರಿಯೆ ಆರಂಭ