ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖಕ್ಕೆ ಸ್ವಾಗತ ಕಾಂಗ್ರೆಸ್ ಜಾರಿಗೆ ತಂದ 5 ಗ್ಯಾರೆಂಟಿಗಳಲ್ಲಿ ಈಗ 5 ನೇ ಗ್ಯಾರೆಂಟಿಯಾದ ಯುವನಿಧಿಯನ್ನ ಜಾರಿಗೊಳಿಸಲಾಗಿದೆ ಹಾಗೆ 5 ನೇ ಗ್ಯಾರೆಂಟಿ ಯೋಜನೆಗೆ ಯಾರೆಲ್ಲಾ ಅರ್ಜಿ ಹಾಕಬೇಕು ಯುವನಿಧಿಗೆ ಅರ್ಜಿ ಹಾಕಲು ಅನೇಕ ವಿದ್ಯಾರ್ಥಿಗಳಲ್ಲಿ ಗೊಂದಲಗಳಿವೆ ನಾವು ಅರ್ಹರೋ ಇಲ್ಲವೋ ಎಂದು ಹಾಗೆ ಅರ್ಜಿ ಹಾಕಲು ಲಿಂಕ್ ಯಾವುದು ಎಂದು ಇನ್ನು ಎಷ್ಟೋ ಜನರಿಗೆ ತಿಳಿದಿಲ್ಲ ಅಂತವರಿಗಾಗಿ ತಮ್ಮ ಗೊಂದಲಗಳನ್ನು ನಿವಾರಿಸಲು ಹಾಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು ಹಾಗೆ ಅರ್ಜಿ ಸಲ್ಲಿಸಲು ಲಿಂಕ್ ಯಾವುದು ಎಂದು ತಿಳಿಯಲು ಈ ಲೇಖನವನ್ನು ಓದಿ.
ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಭರವಸೆ ಯುವನಿಧಿಗೆ ಡಿಸೆಂಬರ್-26 ರಿಂದ ನೋಂದಣಿ ಆರಂಭವಾಗಿದೆ. 2023-24ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಕೆಲಸ ಸಿಗದೆ ನಿರುದ್ಯೋಗಿಗಳಾದ ಯುವಕ ಯುವತಿಯರಿಗೆ 24 ತಿಂಗಳವರೆಗೆ ಅಂದರೆ 2 ವರ್ಷದ ವರೆಗೆ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೋಮಾ ಉತ್ತೀರ್ಣರಾಗಿದ್ದವರಿಗೆ, ಗೆ ಮಾಸಿಕ ರೂ.3000/-, ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ ರೂ.1500/- ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾನದಂಡಗಳು
- ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ.
- ಕರ್ನಾಟಕದಲ್ಲಿ ಕನಿಷ್ಟ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾದವರೆಗೆ ಅಧ್ಯನಯ ಮಾಡಿದವರು.
- ಎಸ್.ಎಸ್.ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು ಅಥವಾ
ಎಸ್.ಎಸ್.ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೋಮಾ ಪ್ರಮಾಣ ಪತ್ರ/ಅಂಕಪಟ್ಟಿ ಅಥವಾ
ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣ ಪತ್ರ ಅಥವಾ
ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ - NIOS( National Institute of Open Schooling) ನೀಡಿದ S.S.L.C ಅಂಕಪಟ್ಟಿಯನ್ನೂ ಸಹ ವಾಸ ಸ್ಥಳ ಪರಿಶೀಲನೆಗಾಗಿ ಪರಿಗಣಿಸುವುದು.
- ಅಭ್ಯರ್ಥಿಯ ಪದವಿ/ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು National Academic Depository (NAD) ಯಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ/ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು.
- ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೊದಲು ಡಿಜಿಲಾಕರ್ ನಲ್ಲಿ ಡಿಜಿಲಾಕರ್ ಖಾತೆಯನ್ನು ಸೃಜಿಸುವ ಮೂಲಕ ತಮ್ಮ National Academic Depository (NAD) ಪ್ರಮಾಣ ಪತ್ರವನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- 2023ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ 2 ವರ್ಷ ಗರಿಷ್ಟ ಅವಧಿ ವರೆಗೆ ಮಾತ್ರ ಈ ಭತ್ಯೆ ಸಿಗಲಿದೆ.
- “ಸೇವಾಸಿಂಧು”, “ಗ್ರಾಮ ಒನ್”, “ಕರ್ನಾಟಕ ಒನ್” ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆದಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು.
- ಅಭ್ಯರ್ಥಿಗಳು ಅರ್ಜಿ ಹಾಕುವ ವೇಳೆ ತಾವು ಉತ್ತೀರ್ಣರಾದ ದಿನದಿಂದ 6 ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟು (ಸ್ಟೇಟ್ ಮೆಂಟ್) ಪ್ರತಿ ನೀಡಬೇಕು.
- ಪದವಿ, ಡಿಪ್ಲೋಮಾ ಬಳಿಕ ಉನ್ನತ ಶಿಕ್ಷಣ ಮುಂದುವರಿಸಿದರೆ ಈ ಭತ್ಯೆಗೆ ಅರ್ಹರಾಗುವುದಿಲ್ಲ.
ಇದನ್ನೂ ಸಹ ಓದಿ: ಶಾಲಾ ಮಕ್ಕಳಿಗೆ ರಜೆಯ ಸುರಿಮಳೆ!! 14 ದಿನಗಳವರೆಗೆ ಎಲ್ಲಾ ಶಾಲೆಗಳು ಕ್ಲೋಸ್
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ.
- ಪದವಿ ಅಭ್ಯರ್ಥಿಗಳಾಗಿದ್ದರೆ ಅಂಕಪಟ್ಟಿ.
- ವಿಶ್ವವಿದ್ಯಾಲಯದ ಪದವಿ ಪ್ರಮಾಣ ಪತ್ರ.
- ಡಿಪ್ಲೋಮಾ ಹೊಂದಿದ್ದರೆ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ನೀಡಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ಬ್ಯಾಂಕ್ ಖಾತೆ ಮತ್ತು ಅದರ ಮಾಹಿತಿ ಅಗತ್ಯವಿದೆ.
ಯುವ ನಿಧಿಗೆ ಅರ್ಜಿ ಸಲ್ಲಿಸುವ ಲಿಂಕ್
ಯುವನಿಧಿಗೆ ಅರ್ಜಿ ಸಲ್ಲಿಸಬಯಸುವವರು ಈ ಕೂಡಲೇ ನಾವು ಈ ಲೇಖನದಲ್ಲಿ ತಿಳಿಸಿದ ಲಿಂಕ್ ಸಹಾಯದಿಂದ ಅರ್ಜಿ ಸಲ್ಲಿಸಿ ಕೂಡಲೇ ಸರ್ಕಾರದಿಂದ ಹೊಸ ವರ್ಷಕ್ಕೆ ಉಡುಗೊರೆಯಾಗಿ ಹಣವನ್ನು ಪಡೆಯಬಹುದಾಗಿದೆ.
ಯುವ ನಿಧಿಗೆ ಅರ್ಜಿ ಸಲ್ಲಿಸುವ ಲಿಂಕ್ https://sevasindhugs.karnataka.gov.in/#
ಸೂಚನೆ: ವಿದ್ಯಾರ್ಥಿಗಳು ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಿಸಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. ಯಾವುದೇ ಅಪ್ರೆಂಟಿಸ್ ಹುದ್ದೆಯಲ್ಲಿದ್ದು ವೇತನ ಪಡೆಯುತ್ತಿರುವವರು, ಸರ್ಕಾರಿ-ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ಸರ್ಕಾರದ ನಾನಾ ಯೋಜನೆಗಳಡಿ ಬ್ಯಾಂಕ್ ಸಾಲಪಡೆದು ಸ್ವ-ಉದ್ಯೋಗ ಆರಂಭಿಸಿದವರು ಈ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಜಿಲ್ಲಾಧಿಕಾರಿಯವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತರೆ ವಿಷಯಗಳು
- ಮತೊಮ್ಮೆ ಧಿಡೀರ್ ಚಿನ್ನದ ಬೆಲೆ ಕುಸಿತ : ಕೆಲವೇ ದಿನಗಳು ಮಾತ್ರ ಇರುತ್ತೆ ಈ ಬೆಲೆ
- ಸರ್ಕಾರಿ ನೌಕರರ ರಜೆ ರದ್ದು.! ಮುಂದಿನ ಆದೇಶದವರೆಗೆ ರಜೆ ನಿಷೇಧಿಸಿದ ಇಲಾಖೆ