ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು, ಪಠ್ಯಕ್ರಮ ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
2024-25ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಈ ಕೆಳಗಿನಂತಿವೆ
- ಮೊರಾರ್ಜಿ ದೇಸಾಯಿ
- ಕಿತ್ತೂರು ರಾಣಿ ಚೆನ್ನಮ್ಮ
- ಏಕಲವ್ಯ ಮಾದರಿ
- ಅಟಲ್ ಬಿಹಾರಿ ವಾಜಪೇಯಿ
- ಶ್ರೀಮತಿ ಇಂದಿರಾ ಗಾಂಧಿ
- ಡಾ॥ ಬಿ.ಆರ್. ಅಂಬೇಡ್ಕರ್
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಸಂಗೊಳ್ಳಿ ರಾಯಣ್ಣ
- ಕವಿರನ್ನ
- ಗಾಂಧಿತತ್ವ
- ಶ್ರೀ ನಾರಾಯಣ ಗುರು
- ಮುಂತಾದ ವಸತಿ ಶಾಲೆಗಳು
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- 2023-24ನೇ ಸಾಲಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- 09 ರಿಂದ 13 ವಯೋಮಾನದವರಾಗಿರಬೇಕು
- ದಾಖಲೆ ಪರಿಶೀಲನೆ ಸಂದರ್ಭದಲ್ಲಿ 5ನೇ ತರಗತಿ ಉತ್ತೀರ್ಣರಾಗಿರುವ ಅಂಕಪಟ್ಟಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
- SATS ID (Student Achievement Tracking System)
- ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
- ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
ಇದನ್ನೂ ಸಹ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್!! ಉಚಿತ ತರಬೇತಿಯೊಂದಿಗೆ ಖಚಿತ ಉದ್ಯೋಗ ಪಡೆಯುವ ಅವಕಾಶ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ (Start Date) – 07-12-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ (Last Date) – 31-12-2023
ಪ್ರವೇಶ ಪರೀಕ್ಷೆ ದಿನಾಂಕ (Exam Date) – 18-02-2024
ಪಠ್ಯಕ್ರಮ:
1. 6 ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕು.
2. ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ 100 ಅಂಕದ ಬಹು ಆಯ್ಕೆಯ ಮಾದರಿಯಲ್ಲಿರುತ್ತದೆ.
ಕನ್ನಡ | 20 ಪ್ರಶ್ನೆ | 20 ಅಂಕಗಳು |
ಇಂಗ್ಲೀಷ್ | 20 ಪ್ರಶ್ನೆ | 20 ಅಂಕಗಳು |
ಗಣಿತ | 20 ಪ್ರಶ್ನೆ | 20 ಅಂಕಗಳು |
ಸಮಾಜ ವಿಜ್ಞಾನ | 20 ಪ್ರಶ್ನೆ | 20 ಅಂಕಗಳು |
ಸಾಮಾನ್ಯ ವಿಜ್ಞಾನ | 20 ಪ್ರಶ್ನೆ | 20 ಅಂಕಗಳು |
ಒಟ್ಟು | 100 ಪ್ರಶ್ನೆಗಳು | 100 ಅಂಕಗಳು |
3. 100 ಅಂಕದ 100 ಪ್ರಶ್ನೆಗಳಿಗೆ ಉತ್ತರಿಸಲು 120 ನಿಮಿಷದ ಸಮಯಾವಕಾಶ ಇರುತ್ತದೆ.
4. ವಸತಿ ಶಾಲೆ ಸೀಟುಗಳ ಹಂಚಿಕೆಗಾಗಿ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕ, ಮೀಸಲಾತಿ ಹಾಗೂ ಅಭ್ಯರ್ಥಿಗಳು ಪ್ರವೇಶಾತಿಗಾಗಿ ನಮೂದಿಸಿರುವ ಶಾಲೆಗಳ ಆದ್ಯತಾ ಕ್ರಮವನ್ನು ಪರಿಗಣಿಸಲಾಗುವುದು.
5. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿರುತ್ತದೆ.
6. ಶೇ. 90ರಷ್ಟು ಪ್ರಶ್ನೆಗಳು 4 ಮತ್ತು 5 ನೇ ತರಗತಿಯ ಪಠ್ಯಾಧಾರಿತವಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಎಲ್ಲಿ?
ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಹತ್ತಿರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ/ಕಾಲೇಜಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಇತರೆ ವಿಷಯಗಳು:
500 ರೂ. ನೋಟು ಹೊಂದಿದವರಿಗೆ ಬಿಗ್ ಅಲರ್ಟ್!! RBI ನಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಇನ್ಮುಂದೆ ಮುದ್ರಾಂಕ ಶುಲ್ಕ 5 ಪಟ್ಟು ಹೆಚ್ಚಳ: ಕರ್ನಾಟಕ ಅಧಿವೇಶನದಲ್ಲಿ ಮಸೂದೆ ಮಂಡನೆ