rtgh

ರೈತರನ್ನು ಮದುವೆ ಆಗೋರಿಗೆ ಗುಡ್‌ ನ್ಯೂಸ್.!!‌ ಇವರಿಗೆ ಸಿಗುವ ಸೌಲಭ್ಯ ಬೇರೆಯಾರಿಗೂ ಇಲ್ಲ; ಮಿಸ್‌ ಮಾಡ್ಕೋಬೇಡಿ

ಹಲೋ ಸ್ನೇಹಿತರೇ, ‘ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಆಗ್ರಹಿಸಿದರು.

Good news for farmers wife

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಕುಟುಂಬಗಳ ಯುವಕರನ್ನು ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಿದ್ದಾರೆ. ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿರುವುದರಿಂದ ಸರ್ಕಾರ ಪರಿಹಾರ ಮಾರ್ಗ ರೂಪಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯವನ್ನು ಬರ ಆವರಿಸಿರುವುದರಿಂದ ಎಲ್ಲ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಉದ್ಯಮಿಗಳು ₹12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುವುದು ಸರಿಯಲ್ಲ. ರೈತರ ಮೋಜು ಮತ್ತು ಮಸ್ತಿಗಾಗಿ ಸಾಲವನ್ನು ಮಾಡುವುದಿಲ್ಲ ದೇಶದ ಜನರಿಗೆ ಆಹಾರ ಉತ್ಪಾದನೆ ಸಲುವಾಗಿ ಸಾಲ ಮಾಡಿದ್ದಾರೆ. ಸಾಲ ಮನ್ನಾದ ಆಂದೋಲನಕ್ಕಾಗಿ ಡಿ.23ರಂದು ಬೆಂಗಳೂರಿನಲ್ಲಿ ರೈತರು ಮಹಾ ಅಧಿವೇಶನ ಹಮ್ಮಿಕೊಂಡಿದ್ದೇವೆ’ ಎಂದು ಕರೆಯನ್ನು ನೀಡಿದ್ದಾರೆ.

‘ಸರ್ಕಾರ ಘೋಷಿಸಿದ ₹2ಸಾವಿರ ರೂ. ಬರ ಪರಿಹಾರ ದಿನದ ಭೂಮಿ ಉಳುಮೆಗೂ ಸಾಲುವುದಿಲ್ಲ ಎನ್ನುವುದನ್ನು ರೈತರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕನಿಷ್ಠ ₹25 ಸಾವಿರ ರೂ. ಬರ ಪರಿಹಾರ ನೀಡಬೇಕು. ಇಲ್ಲದೆ ಇದ್ದರೆ ಬಿಕ್ಷೆ ರೂಪದಲ್ಲಿ ನೀಡುವ ಈ ಏರಡು ಸಾವಿರವು ನಮಗೆ ಬೇಡ ಇದನ್ನು ನಾವು ಸುಟ್ಟು ಹಾಕುತ್ತಿವಿ ಎಂದು ಈ ಸಂದರ್ಭದಲ್ಲಿ ಗುಡುಗಿದ್ದಾರೆ.


ಸರ್ಕಾರಿ ಶಿಕ್ಷಕ ಕೆಲಸ ಕಾಯುತ್ತಿದ್ದವವರಿಗೆ ಭರ್ಜರಿ ಗುಡ್‌ ನ್ಯೂಸ್!!‌ ಮತ್ತಷ್ಟು ಶಿಕ್ಷಕರ ನೇಮಕಕ್ಕೆ ಮಧು ಬಂಗಾರಪ್ಪ ಭರವಸೆ

ಪ್ರತಿ ಗ್ರಾಮೀಣ ಕುಟುಂಬದವರಿಗೂ ಬಂತು ಹೊಸ ಯೋಜನೆ!! ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ ಜಾರಿ

Leave a Comment