rtgh

ಈ ರೀತಿ ಸರ್ಚ್ ಮಾಡಿದ್ರೆ ಅಷ್ಟೇ ನಿಮ್ಮ ಕಥೆ; ಗೂಗಲ್‌ ಬಳಕೆ ಮಾಡುವವರೇ ಹುಷಾರ್.!!‌

ಹಲೋ ಸ್ನೇಹಿತರೇ, ನಮಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕೆಂದಲ್ಲಿ ಕೂಡಲೇ ಗೂಗಲ್​ನಲ್ಲಿ ಹುಡುಕುತ್ತೇವೆ. ಅಡ್ರೆಸ್ ಮತ್ತು ವೆಬ್​ಸೈಟ್ಸ್ ಹಾಗೂ ಮೂವೀಸ್ ಹೀಗೆ ಯಾವುದರ ಬಗ್ಗೆ ಬೇಕಾದರೂ ಗೂಗಲ್ ನಲ್ಲಿ ಸರ್ಚ್ ಮಾಡುತ್ತೇವೆ. ಹೀಗಾಗಿ ಇಂಟರ್​​ನೆಟ್​​​ನಲ್ಲಿ ಗೂಗಲ್ ಸರ್ಚ್​ ನಮ್ಮ ಬೆಸ್ಟ್​ ಫ್ರೆಂಡ್ ಆಗಿದೆ ಎಂದರು ತಪ್ಪಾಗುವುದಿಲ್ಲ, ಆದ್ರೆ ಕೆಲವೊಂದು ಸಂದರ್ಭದಲ್ಲಿ ಗೂಗಲ್​ ಸರ್ಚ್​ ನಿಮ್ಮನ್ನು ತೊಂದರೆಗೆ ಸಿಕ್ಕಿಸುತ್ತದೆ. ನೀವು ಸರ್ಚ್ ಮಾಡಿದ ವಿಷಯಗಳನ್ನು ಸ್ಕ್ಯಾಮರ್​​ಗಳು ಲಾಭ ಪಡೆಯಲು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

you can't search like this in google chrome

ಜೊತೆಗೆ ವೈದ್ಯಕೀಯ ಅಥವಾ ವೃತ್ತಿ ಸಲಹೆ ವಿಷಯಕ್ಕೆ ಬಂದಾಗ ಕೆಲವೊಮ್ಮೆ ನೀವು ತಪ್ಪು ಮಾಹಿತಿ ಪಡೆಯಲೂಬಹುದು.ಗೂಗಲ್​ನಲ್ಲಿ ನಾವು ಹುಡುಕುವ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಬಹಳ ಕಷ್ಟ. ಏಕೆಂದರೆ ಗೂಗಲ್ ಸರ್ಚ್ ಕೇವಲ ಒಂದು ಆನ್​ಲೈನ್​ ಪ್ಲಾಟ್​ಫಾರ್ಮ್​ ಆಗಿದ್ದು, ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀಡುವ ವೆಬ್​ಸೈಟ್​​ಗಳನ್ನು ಕಂಡುಕೊಳ್ಳುತ್ತೀರಿ. ನೀವು ಯಾವ ವಿಷಯವನ್ನು ಹುಡುಕುತ್ತೀರಿ ಎಂಬುದಕ್ಕಿಂತ ಹೆಚ್ಚಾಗಿ, ಗೂಗಲ್ ಹುಡುಕಾಟದಲ್ಲಿ ನೀವು ಯಾವ ರಿಸಲ್ಟ್​ ಪಡೆಯುತ್ತೀರಿ ಎಂಬುದರ ಹಿಂದೆ ಎಸ್​​​ಇಒ ಕೌಶಲ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹ್ಯಾಕರ್ಸ್​​ಗಳು ಇಲ್ಲಿ ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಗೂಗಲ್​ನಲ್ಲಿ ಈ 8 ವಿಷಯಗಳ ಬಗ್ಗೆ ಹುಡುಕುವಾಗ ಎಚ್ಚರಿಕೆಯಿಂದ ಇರಬೇಕು.

1. ಕಸ್ಟಮರ್​ ಕೇರ್​ ಕಾಂಟ್ಯಾಕ್ಟ್​​ ನಂಬರ್​ ಸರ್ಚ್​ ಮಾಡುವಾಗ ಎಚ್ಚರ..!:- ಇದೊಂದು ಜನಪ್ರಿಯ ಆನ್​ಲೈನ್ ಹಗರಣಗಳಲ್ಲಿ​ ಒಂದಾಗಿದೆ. ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್​ ಮತ್ತು ಕಸ್ಟಮರ್​​ ಕೇರ್​ ನಂಬರ್​ಗಳನ್ನು ವೆಬ್​ಸೈಟ್​​ಗಳಲ್ಲಿ ಪೋಸ್ಟ್​ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬುತ್ತಾರೆ. ಹೆಚ್ಚಿನ ಅಪ್ಲಿಕೇಶನ್​ಗಳು ಇನ್​ ಬಿಲ್ಟ್​ ಕಸ್ಟಮರ್​ ಕೇರ್​​ ಚಾಟ್​ ವಿಂಡೋಸ್​​ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ಕಾಂಟ್ಯಾಕ್ಟ್​ ನಂಬರ್​ನ್ನು ಹೊಂದಿರುವುದಿಲ್ಲ.

2. ಬ್ಯಾಂಕಿಂಗ್​ಗೆ ಸಂಬಂಧಿಸಿದ ವೆಬ್​ಸೈಟ್ ಚೆಕ್​ ಮಾಡುವಾಗ​​ URL ​​​​​​​​ನ್ನು ಎರಡೆರಡು ಬಾರಿ ಪರಿಶೀಲಿಸಿ:- ಬ್ಯಾಂಕಿಂಗ್​​ಗೆ ಸಂಬಂಧಿಸಿದ ವೆಬ್​ಸೈಟ್​​ಗಳನ್ನು ಚೆಕ್ ಮಾಡುವಾದ ಜಾಗ್ರತೆ ವಹಿಸಬೇಕು. ಹೀಗಾಗಿ ಎರಡೆರಡು ಬಾರಿ URL ನ್ನು ಪರಿಶೀಲಿಸಬೇಕು. ಅಧಿಕೃತ URL ಎಂದು ನಿಮ್ಮ ಗಮನಕ್ಕೆ ಬರುವವರೆಗೂ ಸರಿಯಾಗಿ ಪರಿಶೀಲಿಸುತ್ತಿರಲೇ ಬೇಕು. ಯಾಕೆಂದರೆ, ಸ್ಕ್ಯಾಮರ್ಸ್​​ಗಳು ನಕಲಿ ಆನ್​ಲೈನ್​ ಬ್ಯಾಂಕಿಂಗ್​​ ವೆಬ್​ಸೈಟ್​​ಗಳನ್ನು ಪೋಸ್ಟ್​ ಮಾಡಿರುವ ಸಾಧ್ಯತೆ ಇರುತ್ತದೆ. ನೀವು ಅರಿಯದೆ ಆ ವೆಬ್​ಸೈಟ್​​ಗಳಲ್ಲಿ ನಿಮ್ಮ ಲಾಗಿಲ್​ ಮಾಹಿತಿಯನ್ನು ನೀಡಿದರೆ ಮೋಸ ಹೋಗುತ್ತೀರಿ ಎಚ್ಚರಿಕೆ. ಹೀಗಾಗಿ ಯಾವಾಗಲೂ ಸುರಕ್ಷಿತ ಆನ್​​​ಲೈನ್​ ಬ್ಯಾಂಕಿಂಗ್​​ ಪೋರ್ಟಲ್​ಗೆ ಲಾಗಿನ್​ ಆಗಲು​​​ ಅಧಿಕೃತ URL ನಮೂದಿಸಿ.


3. ಗೂಗಲ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಲು ಆ್ಯಪ್ಸ್​ ಮತ್ತು ಸಾಫ್ಟ್​​ವೇರ್​​​ಗಳನ್ನು ಹುಡುಕಬೇಡಿ:- ಆ್ಯಪ್ಸ್​, ಸಾಫ್ಟ್​ವೇರ್​ ಹಾಗೂ ಇನ್ನಿತರೆ ಫೈಲ್​ಗಳನ್ನು ಗೂಗಲ್​ನಲ್ಲಿ ಹುಡುಕಲು ಹೋಗಬೇಡಿ. ಯಾಕೆಂದರೆ ಗೂಗಲ್​ನಲ್ಲಿ ಕೆಲವೊಮ್ಮೆ ದುದ್ದೇಶಪೂರಿತ ಸಾಫ್ಟ್​​ವೇರ್​​​ಗಳು ಹಾಗೂ ಅಪ್ಲಿಕೇಶನ್​ಗಳ ರಾಶಿ ಇರುತ್ತದೆ. ಹಾಗಾಗಿ ಯಾವಾಗಲೂ ಅಧಿಕೃತ ಆ್ಯಪ್​​ ಸ್ಟೋರ್​ಗಳಿಂದ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಿ. ಆ್ಯಂಡ್ರಾಯ್ಡ್​​ನಲ್ಲಿ ಗೂಗಲ್​ ಪ್ಲೇ ಮತ್ತು ಐಫೋನ್​ಗಳಲ್ಲಿ ಆ್ಯಪ್​ ಸ್ಟೋರ್​​​ ಎಂಬ ಅಧಿಕೃತ ಆ್ಯಪ್​ಗಳು ಲಭ್ಯವಿರುತ್ತವೆ. ಇವುಗಳಲ್ಲಿ ನೀವು ಆ್ಯಪ್ ಅಥವಾ ಸಾಫ್ಟ್​ವೇರ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

ದಂಪತಿಗಳಿಗೆ ಹೊಡಿತು ಲಾಟ್ರಿ.! ಸರ್ಕಾರದ ಈ ಯೋಜನೆಯಡಿ ಗಂಡ ಹೆಂಡತಿ ಇಬ್ಬರಿಗೂ 5 ಸಾವಿರ ರೂ

4.ಗೂಗಲ್​ನಲ್ಲಿ ಮೆಡಿಸಿನ್ ಬಗ್ಗೆ ಸರ್ಚ್​ ಮಾಡುವ ಮೊದಲು ಡಾಕ್ಟರ್​​​ ಬಳಿ ಸಮಾಲೋಚಿಸಿ:- ನಿಮಗೆ ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿ ಹೋಗಿ. ಆದರೆ ಗೂಗಲ್​ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್​ ಮಾಡಬೇಡಿ. ಯಾಕೆಂದರೆ ಗೂಗಲ್​ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್​ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಗೂಗಲ್​ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿ.

5.ತೂಕ ಇಳಿಸುವಿಕೆ ಅಥವಾ ನ್ಯೂಟ್ರಿಷನ್ ಬಗ್ಗೆ ಗೂಗಲ್ ಸರ್ಚ್ ಮಾಡದಿರುವುದು ಒಳಿತು:- ಪ್ರತಿಯೊಬ್ಬ ಮಾನವನ ದೇಹವು ಒಂದೊಂದು ರೀತಿಯ ಆಕಾರ, ರಚನೆ ಹೊಂದಿರುತ್ತದೆ. ಹೀಗಾಗಿ ತೂಕ ಇಳಿಸುವಿಕೆ ಅಥವಾ ಪೌಷ್ಟಿಕಾಂಶ ಸಲಹೆಗಳನ್ನು ಗೂಗಲ್​ನಿಂದ ಪಡೆಯಬೇಡಿ. ನಿಮ್ಮ ಡಯೆಟ್​ ಬದಲಾವಣೆ ಮಾಡಬೇಕಾದರೆ ವೈದ್ಯರನ್ನು ಸಂಪರ್ಕಿಸಿ. ತೂಕ ಇಳಿಸುವುದಾರೂ ಸಹ ವೈದ್ಯರ ಸಲಹೆ ಪಡೆಯಿರಿ.

6. ಗೂಗಲ್​​ನಲ್ಲಿ ಸರ್ಚ್​ ಮಾಡಿದಾಗ ಸಿಗುವ ಪರ್ಸನಲ್​ ಫೈನಾನ್ಸ್​​, ಸ್ಟಾಕ್ ಮಾರ್ಕೆಟ್​ ಟಿಪ್ಸ್​​ ಗಳನ್ನು ನಂಬಬೇಡಿ:- ಆರೋಗ್ಯ, ಪರ್ಸನಲ್ ಫೈನಾನ್ಸ್​ ವಿಷಯಗಳು ಒಬ್ಬರಿಂದ ಒಬ್ಬರಿಗೆ ವೈಶಿಷ್ಟ್ಯವಾಗಿರುತ್ತವೆ. ಕೇವಲ ಒಂದು ಇನ್ವೆಸ್ಟ್​ಮೆಂಟ್ ಪ್ಲ್ಯಾನ್​ನಿಂದ ಯಾರೂ ಸಹ ಶ್ರೀಮಂತರಾಗಲು ಸಾಧ್ಯವಿಲ್ಲ. ಹೀಗಾಗಿ ಬಂಡವಾಳ ಹೂಡಿಕೆ ವಿಷಯದಲ್ಲಿ ಗೂಗಲ್​ ನೀಡುವ ಸಲಹೆಗಳನ್ನು ತೆಗೆದುಕೊಳ್ಳಬೇಡಿ.

7. ಗೂಗಲ್​ ಸರ್ಚ್​ ಮಾಡುವಾಗ ಸರ್ಕಾರಿ ವೆಬ್​ಸೈಟ್​​ಗಳ URLಗಳನ್ನು ಯಾವಾಗಲೂ ಪರಿಶೀಲಿಸಿ:- ಬ್ಯಾಂಕಿಂಗ್ ವೆಬ್​​ಸೈಟ್​​​ಗಳು, ಸರ್ಕಾರಿ ವೆಬ್​ಸೈಟ್​​​ಗಳಾದ ಮುನಿಸಿಪಾಲಿಟಿ ಟ್ಯಾಕ್ಸ್​, ಹಾಸ್ಪಿಟಲ್ಸ್​​ ಇತ್ಯಾದಿ ವಿಷಯಗಳ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡುವಾಗ ಅವುಗಳ ಅಧಿಕೃತ URLಗಳನ್ನು ಎರಡೆರಡು ಬಾರಿ ಪರಿಶೀಲಿಸಿ. ಈ ವೆಬ್​ಸೈಟ್​​​​ಗಳನ್ನು ಸ್ಕ್ಯಾಮರ್​​ಗಳು ಟಾರ್ಗೆಟ್​ ಮಾಡುವ ಸಾಧ್ಯತೆ ಇರುತ್ತದೆ. ನಿಮಗೆ ಯಾವುದು ಒರಿಜಿನಲ್​ ಅಥವಾ ಡೂಪ್ಲಿಕೇಟ್​ ಎಂದು ಗೊತ್ತಾಗದಿದ್ದರೆ, ಅಧಿಕೃತ ಸರ್ಕಾರಿ ವೆಬ್​​ಸೈಟ್​​ಗೆ ಭೇಟಿ ನೀಡಬಹುದು.

8. ಕೂಪನ್ಸ್​​​​​​​, ಇ-ಕಾಮರ್ಸ್​​ ವೆಬ್​​​ಸೈಟ್​ ಆಫರ್​​​ಗಳ ಬಗ್ಗೆ ಗೂಗಲ್​ ಸರ್ಚ್ ಮಾಡಬೇಡಿ:- ಗೂಗಲ್ ಸರ್ಚ್​ ಮಾಡಿದಾಗ ನಕಲಿ ವೆಬ್​ಪೇಜ್​​ಗಳು ಇ-ಕಾಮರ್ಸ್​​​ ವೆಬ್​​ಸೈಟ್​​​ಗಳ ಬಗ್ಗೆ ಆಫರ್​ಗಳನ್ನು ನೀಡಿರುತ್ತವೆ. ಇದು ಮತ್ತೊಂದು ಹಗರಣವಾಗಿದ್ದು, ಜನರನ್ನು ಆಕರ್ಷಿಸಲು ಯತ್ನಿಸುತ್ತವೆ. ಹೀಗಾಗಿ ಕೂಪನ್ಸ್​, ಇ-ಕಾಮರ್ಸ್​​ ವೆಬ್​ಸೈಟ್​​ ಬಗ್ಗೆ ಗೂಗಲ್​ನಲ್ಲಿ ಹುಡುಕಬೇಡಿ.

ರಾಜ್ಯದ ಜನತೆಗೆ ಮುಂದಿನ 5 ದಿನಗಳವರೆಗೆ ಭಾರೀ ಮಳೆಯ ಮುನ್ಸೂಚನೆ!! ಮೈಚಾಂಗ್ ಚಂಡಮಾರುತ

LPG ಸಿಲಿಂಡರ್ ಹೊಸ ಬೆಲೆ ಅನ್ವಯ!! ಮತ್ತೆ ಏರಿಕೆಯೊಂದಿಗೆ ದೇಶಾದ್ಯಂತ ಹೊಸ ಬೆಲೆ ಜಾರಿ

Leave a Comment