ಹಲೋ ಸ್ನೇಹಿತರೇ, ಪ್ರತಿಯೊಂದು ಮಹಿಳೆಯು ಆರ್ಥಿಕವಾಗಿ, ಸಾಮಾಜಿಕವಾಗಿ ಎಂದಿಗೂ ಸ್ವಾವಲಂಬಿಯಾಗಿರಬೇಕು. ಈ ಕಾರಣದಿಂದಲೇ ಸರ್ಕಾರ ಅನೇಕ ಕಾನೂನುಗಳನ್ನು ನಿಯಮಗಳನ್ನು, ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಹಾಗೇ ಇದೀಗ ರಾಜ್ಯ ಸರ್ಕಾರ ಧನ ಸಹಾಯದ ರೂಪದಲ್ಲಿ ಮಹಿಳೆಯರಿಗೆ ಹೆಣ್ಣು ಮಕ್ಕಳ ಅಭಿವೃಧ್ದಿಗಾಗಿ ಶ್ರಮಿಸುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಯೋಜನೆ ಏನು? ಸರ್ಕಾರ ಇದಕ್ಕೆ ಹೇಗೆ ಹಣ ಸಹಾಯವನ್ನು ಮಾಡುತ್ತದೆ ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ 18 ರಿಂದ 55 ವರ್ಷದೊಳಗೆ ವಯೋಮಿತಿ ಇರುವ ಆಸಕ್ತ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನವನ್ನು ನೀಡಲಾಗಿದೆ. 2023-24ನೇ ಸಾಲಿಗೆ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಮಹಿಳೆಯರು ನಿಗದಿತ ಸಮಯದೊಳಗೆ ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಉದ್ಯೋಗಿನಿ ಯೋಜನೆ:
ಉದ್ಯೋಗಿನಿ ಯೋಜನೆಯ ಪ್ರಕಾರ ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು ಎಂದು ಸರ್ಕಾರ ತಿಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಆದಾಯದ ಮಿತಿಯು ಎರಡು ಲಕ್ಷ ರೂಪಾಯಿಗಳ ಒಳಗೆ ಇರಬೇಕು. ಸಾಮಾನ್ಯ ವರ್ಗ ಆದಾಯ ಮಿತಿ : 1.50 ಲಕ್ಷ ರೂಪಾಯಿಗಳು ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳು ಸಹಾಯಧನ: ಶೇ.30 ರಷ್ಟು ಇರುತ್ತದೆ ಎಂದೂ ತಿಳಿಸಿದ್ದಾರೆ.
ಇತರೆ ವಿಷಯಗಳು:
KEA ಪರೀಕ್ಷೆಗಳ ನಿಯಮ ಮತ್ತೆ ಬದಲಾವಣೆ..! ಹಿಜಾಬ್ ಧರಿಸಲು ಅನುಮತಿ, ಪೂರ್ಣ ತೋಳಿನ ಶರ್ಟ್ ಧರಿಸಲು ನಿಷೇಧ