ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಆಧಾರ್ ಕಾರ್ಡ್ ನ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇನ್ಮುಂದೆ ಆಧಾರ್ ಕಾರ್ಡ್‌ನ್ನು ಪದೇ ಪದೇ ಬದಲಾಯಿಸಲು ಅವಕಾಶವಿರುವುದಿಲ್ಲ. ಆಧಾರ್ ಅಪ್ಡೇಟ್ ಗೆ ಮಿತಿಯನ್ನು ಘೋಷಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಇತ್ತಿಚೆಗೆ UIDAI ಅನೇಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸದ್ಯ ಆಧಾರ್ ಕಾರ್ಡ್ ಸರ್ಕಾರಿ ಹಾಗೂ ಖಾಸಗಿ ಕೆಲಸಗಳಿಗೆ ಮುಖ್ಯವಾದಂತಹ ದಾಖಲೆಯಾಗಿದೆ. ಆಧಾರ್ ನ ಮಾಹಿತಿ ಇಲ್ಲದೇ ಯಾವ ಕೆಲಸವನ್ನು ಕೂಡ ಪೂರ್ಣಗೊಳಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವು ಇನ್ನಿತರ ಯಾವುದೇ ವೈಯಕ್ತಿಕ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎಂದು ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶದ ಮೇರೆಗೆ Aadhaar ಕಾರ್ಡ್ ಹೊಂದಿರುವಂತಹವರು ತಮ್ಮ ಎಲ್ಲಾ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ. ಇನ್ನು ಆಧಾರ್ ಮಾಹಿತಿಯನ್ನು UIDAI ಪ್ರತ್ಯೇಕ ನಿಯಮಗಳನ್ನು ಪರಿಚಯಿಸಿದೆ. ಇದೀಗ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು ಹಾಗೂ ಹೊಸ ನಿಯಮಗಳೇನು ಎಂಬುದರ ಕುರಿತು ಈ ಲೇಖನದಲ್ಲಿ ನೀಡಲಾಗಿದೆ.
ಆಧಾರ್ ನಲ್ಲಿನ ಮಾಹಿತಿಯನ್ನು ಬದಲಾಯಿಸಲು UIDAI ನಿಯಮಗಳು ಏನೆಂದರೆ ಇನ್ಮುಂದೆ ಆಧಾರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆನ್ಲೈನ್ ನಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನು ಆಧಾರ್ ವಿಳಾಸ ಬದಲಾವಣೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ನಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳಾಗುತ್ತದೆ.
ಇದನ್ನುಸಹ ಓದಿ: ಸಾಲ ತೆಗೆದುಕೊಂಡವರಿಗೆ ರಿಸರ್ವ್ ಬ್ಯಾಂಕ್ ನಿಂದ ಬಿಗಿ ಬಂದೋಬಸ್ತ್!!! ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್
ನಿಮ್ಮ ಆಧಾರ್ ನಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ UIDAI ಸೂಚನೆಯನ್ನು ನೀಡಿದೆ. ಹೆಸರು, ವಿಳಾಸ, ಜನ್ಮ ದಿನಾಂಕ ಸೇರಿದಂತೆ ಬಯೋಮೆಟ್ರಿಕ್, ಪಿಂಗರ್ ಪ್ರಿಂಟ್ ಹಾಗೂ ಫೋಟೋವನ್ನು ಕೂಡ ನವೀಕರಿಸಲು ಅವಕಾಶವಿದೆ.
ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಜನ್ಮ ದಿನಾಂಕ ಹಾಗೂ ಹೆಸರನ್ನು ಬದಲಾವಣೆ ಕೂಡ ಮಾಡಬಹುದು. ಆದರೆ ಜನ್ಮ ದಿನಾಂಕ ಹಾಗೂ ಹೆಸರಿನ ಬದಲಾವಣೆಯನ್ನು 2 ಬಾರಿ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಆಧಾರ್ ನಲ್ಲಿರುವಂತಹ ಲಿಂಗ ಬದಲಾವಣೆಯನ್ನು ಒಂದು ಬಾರಿ ಮಾತ್ರ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಇನ್ನು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಯಾವುದೇ ಮಿತಿ ಇಲ್ಲ.
ಇನ್ನು ಆಧಾರ್ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆ ಹೆಚ್ಚಿನ ಬಾರಿ ಬದಲಾಯಿಸಲು ಇನ್ನು ಮಿತಿಯನ್ನು ನಿಗದಿಪಡಿಸಿಲ್ಲ. ಮಿತಿಗಿಂತ ಹೆಚ್ಚು ಬಾರಿ ಮಾಹಿತಿಯನ್ನು ಬದಲಾವಣೆ ಮಾಡುವ ಅಗತ್ಯ ಬಿದ್ದರೆ ಹತ್ತಿರದ ಆಧಾರ್ ಕಾರ್ಡ್ ಕೇಂದ್ರ ಕ್ಕೆ ಭೇಟಿ ನೀಡಿ ಮಾಹಿತಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ತಕ್ಷಣವೇ ವಿದ್ಯುತ್ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ! ಎಚ್ಚರಿಕೆ ನೀಡಿದ ವಿದ್ಯುತ್ ಮಂಡಳಿ
ರಾಜ್ಯದ ಜನತೆಗೆ ದೀಪಾವಳಿಗೆ ಮೋದಿ ಗಿಫ್ಟ್: LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಕುಸಿತ.!