ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಭೂಮಿ ಅನೇಕ ವಿಸ್ಮಯಗಳನ್ನು ತನ್ನ ಒಡಲೊಳಗೆ ಅಡಗಿಸಿಕೊಂಡಿದೆ. ಈ ವಿಸ್ಮಯಗಳನ್ನು ಒಂದೊಂದಾಗಿ ಕಂಡುಹಿಡಿಯಲು ವಿಜ್ಞಾನಿಗಳು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಕೈಗೊಳುತ್ತಿದ್ದಾರೆ. ವಿಜ್ಞಾನಿಗಳು ಎಷ್ಟೆ ಸಂಶೋಧನೆಗಳನ್ನು ಮಾಡಿದರು ನಿಸರ್ಗ ತನ್ನೊಳಗೆ ಮುಗಿಯದ ರಹಸ್ಯಗಳನ್ನು ಬಿಚ್ಚಿಡುತ್ತಲೇ ಇದೆ.
ಬಾನಂಗಳದಲ್ಲು ಸಹ ಒಮ್ಮೊಮ್ಮೆ ನಮ್ಮ ಕಣ್ಣಿಗೆ ಇಂತಹ ಚಮತ್ಕಾರಗಳು ಗೋಚರಿಸುತ್ತಲೇ ಇರುತ್ತವೆ. ಆಕಾಶದಲ್ಲಿ ಸೂರ್ಯ ಮುಳುಗಿದ ಆಗಸದಲ್ಲಿ ಚಂದ್ರ ಮತ್ತು ನಕ್ಷತ್ರಗಳು ಕಾಣಸಿಗುತ್ತದೆ. ಈ ಸಮಯದಲ್ಲಿ ನಮ್ಮ ಕಣ್ಣುಗಳನ್ನು ವಿಸ್ಮಯಗೊಳಿಸಲು ಒಂದೊಂದೇ ಚಮತ್ಕಾರಗಳು ಕಂಡುಬರುತ್ತವೆ.
ಇಂದು ಬಾನಂಗಳದಲ್ಲಿ ನಡೆಯಲಿದೆ ಚಮತ್ಕಾರ
ರಾತ್ರಿಯ ಸಮಯದಲ್ಲಿ ಬಾನಂಗಳದಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಚಂದ್ರನ ಬಳಿ ಒಂದು ಹೊಳೆಯುವ ನಕ್ಷತ್ರವನ್ನು ನೋಡಿರುತ್ತೀರಿ. ಸಾಮನ್ಯವಾಗಿ ಇದನ್ನು ಎಲ್ಲರು ಗಮನಿಸಿದ್ದೀರಿ. ಆದರೆ ನೀವು ಇದನ್ನು ನಕ್ಷತ್ರ ಎಂದು ಭಾವಿಸಿದರೆ ಇದನ್ನು ನೀವು ಮ್ಯಾಜಿಕ್ ಎಂದು ಒಪ್ಪಿಕೊಳ್ಳಬೇಕು. ಏಕೆಂದರೆ ಇದು ನಕ್ಷತ್ರ ಅಲ್ಲ ಗುರು ಗ್ರಹವಾಗಿದೆ ಹಾಗೂ ಈ ಗ್ರಹವೂ ಅತ್ಯಂತ ಪ್ರಕಾಶಮಾನವಾಗಿರುವುದರಿಂದ ಹೊಳೆಯುತ್ತದೆ. ಹಾಗೆಯೇ ವೀಕ್ಷಕರಿಗೆ ನಕ್ಷತ್ರದಂತೆ ಕಾಣಿಸುತ್ತದೆ.
ಗುರು ಗ್ರಹದ ಈ ವಿಶೇಷ ನೋಟ ವರ್ಷದ ಸೀಮಿತ ದಿನದಂದು ಗೋಚರಿಸುತ್ತದೆ. ಅದೆರೀತಿ ಈ ವರ್ಷ ನವೆಂಬರ್ 3 ರಂದು ಗುರು ಗ್ರಹದ ಈ ವಿಶೇಷ ಉಜ್ವಲ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಪ್ರಕಾಶಮಾನವಾಗಿ ಹೊಳೆಯಲಿರುವ ಗುರು ಗ್ರಹ
ಸೌರವ್ಯೂಹದ ಅತಿದೊಡ್ಡ ಗ್ರಹ ಎಂದೆ ಖ್ಯಾತಿ ಪಡೆದಿರುವ ಗುರು ಗ್ರಹ ವಿರುದ್ಧ ದಿಕ್ಕಿನಲ್ಲಿದೆ ಅದರ್ಥ ಸೂರ್ಯನ ನೇರವಾಗಿ ವಿರುದ್ದ ದಿಕ್ಕಿನಲ್ಲಿದೆ. ಈ ಸ್ಥಳಾಂತರದಿಂದ ರಾತ್ರಿಯ ಸಮಯ ಹೆಚ್ಚು ಈ ಗ್ರಹವನ್ನು ಆಕಾಶದಲ್ಲಿ ವೀಕ್ಷಿಸಲು ಅವಕಾಶವನ್ನೊದಗಿಸುತ್ತದೆ. ಗುರು ಗ್ರಹವು ಭೂಮಿಗಿಂತ ಸುಮಾರು 318 ಪಟ್ಟು ದ್ರವ್ಯರಾಶಿಯನ್ನು ಮತ್ತು ಸುಮಾರು 1320 ಪಟ್ಟು ಹೆಚ್ಚಿನ ಬೃಹತ್ ಗಾತ್ರವನ್ನು ಹೊಂದಿರುವ ನಕ್ಷತ್ರದಂತೆಯೇ ಹೊಳೆಯುವ ಗ್ರಹವಾಗಿದೆ.
ಸಿಎಂ ಬದಲಾವಣೆಗೆ ಖಡಕ್ ಉತ್ತರ ಕೊಟ್ಟ ಸಿದ್ದು: ನಾನೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ!
ಸರಿಸುಮಾರು ಪ್ರತಿ 10 ಗಂಟೆಗಳಿಗೊಮ್ಮೆ ತನ್ನ ಅಕ್ಷದ ಮೇಲೆ ತಿರುಗುವಿಕೆಯನ್ನು ಪೂರ್ಣಗೊಳಿಸುತ್ತದೆ, ಹಾಗೆಯೇ ಈ ಗ್ರಹವು ಕಡಿಮೆ ಸೌರದಿನವನ್ನು ಹೊಂದಿದ ಗ್ರಹವಾಗಿದೆ.
ನವೆಂಬರ್ 3 ಕ್ಕೆ ಆಕಾಶದಲ್ಲಿ ವಿಸ್ಮಯ ನಡೆಯಲಿದೆ:
ಗುರು ಗ್ರಹವು ವಿರುದ್ಧ ದಿಕ್ಕನ್ನು ಸುಮಾರು 13 ತಿಂಗಳಿಗೊಮ್ಮೆ ಅಥವಾ ಪ್ರತಿ 399 ದಿನಗಳಿಗೊಮ್ಮೆ ಮುಟ್ಟುತ್ತದೆ. ಪ್ರತಿ ವರ್ಷದಂತೆ ಈ ವರ್ಷ ನ. 3, 2023 ರಂದು ವಿರುದ್ಧ ದಿಕ್ಕಿನಲ್ಲಿರುತ್ತದೆ. ಈ ಸಮಯದಲ್ಲಿ ಗ್ರಹವು ಭೂವಿಗೆ ತುಂಬ ಹತ್ತಿರವಾಗಿರುತ್ತದೆ ಇದರಿಂದ ಈ ಗ್ರಹದ ಗೋಚರತೆ ಮತ್ತು ಹೊಳಪು ದುಪ್ಪಟ್ಟಾಗಿರುತ್ತದೆ. ನೀವು ಇದನ್ನು ಯಾವುದೇ ಟೆಲಿಸ್ಕೋಪ್ ಸಹಾಯವಿಲ್ಲದೆ ಬರಿಗಣ್ಣಿನಲ್ಲಿ ನೋಡಬಹುದು.
ಸೋಜಿಗದ ಅನ್ವೇಷಣೆಗೆ ದಾರಿ
ಈ ಗ್ರಹವು ವಿರುದ್ದ ದಿಕ್ಕಿನಲ್ಲಿರುವಾಗ ಭೂಮಿಗೆ ಹತ್ತರದಲ್ಲಿದ್ದರೂ ಆಕಾಶದಲ್ಲಿ ಹೆಚ್ಚಿನ ದೂರವನ್ನು ಹೊಂದಿರುತ್ತದೆ. ಸೂರ್ಯನ ಸುತ್ತ ಕಕ್ಷೆಯನ್ನು ಸಂಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಸುಮಾರು 4331 ಭೂಮಿಯ ದಿನಗಳು. ಅಂದರೆ ಇದು ಒಟ್ಟು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ನವೆಂಬರ್ 3 ಹತ್ತಿರ ಬರುತಿದ್ದಂತೆಯೇ ಗುರು ಗ್ರಹ ಇನ್ನಷ್ಟು ಸ್ಪಷ್ಟವಾಗಿ ಹೊಳೆಯುತ್ತಾ ಗೋಚರಿಸುತ್ತದೆ. ಇದು ಖಗೋಳಶಾಸ್ತ್ರ ಆಸಕ್ತರಿಗೆ ಸೋಜಿಗದ ಅನ್ವೇಷಣೆಗಳಿಗೆ ದಾರಿಮಾಡಿಕೊಡುತ್ತದೆ.
ಇತರೆ ವಿಷಯಗಳು:
ರೈತರೇ ಇತ್ತ ಕಡೆ ಗಮನಕೊಡಿ: ಪಿಎಂ ಕಿಸಾನ್ 15 ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
ವಾಹನ ಸವಾರರಿಗೆ ಬಿಗ್ ರಿಲೀಫ್; ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಮುಂದಾದ ಇಂಧನ ಇಲಾಖೆ..!