rtgh

ಕರ್ನಾಟಕ್ಕೆ ಬಂತು ಮತ್ತೊಂದು ವೈರಸ್.!‌ ಆರೋಗ್ಯ ಇಲಾಖೆ ಹೈ ಅಲರ್ಟ್

ಝಿಕಾ ವೈರಸ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಜ್ವರದಿಂದ ಬಳಲುತ್ತಿರುವ 7 ಜನರನ್ನು ಪರೀಕ್ಷಿಸಲಾಗಿದ್ದು, ಅವರ ರಕ್ತದ ಮಾದರಿಗಳನ್ನು ಈಗಾಗಲೇ ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.

Zika Virus Cases Rise In Karnataka

ಇದೀಗ ಕರ್ನಾಟಕಕ್ಕೆ ಮಾರಣಾಂತಿಕ ಝಿಕಾ ವೈರಸ್ ಭೀತಿ ಶುರುವಾಗಿದೆ . ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಇದೀಗ ಝಿಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ತಲಕಾಯಲಬೆಟ್ಟ ಸಮೀಪದ ವೆಂಕಟಾಪುರ, ಬಚ್ಚನಹಳ್ಳಿ, ವಡ್ಡಹಳ್ಳಿ, ದಿಬ್ಬೂರಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ.

ಗ್ರಾಮದಲ್ಲಿ 30ಕ್ಕೂ ಹೆಚ್ಚು ಗರ್ಭಿಣಿಯರು ಹಾಗೂ 7 ಮಂದಿ ಜ್ವರದಿಂದ ಬಳಲುತ್ತಿದ್ದು, ಅವರ ರಕ್ತದ ಮಾದರಿಯನ್ನು ಈಗಾಗಲೇ ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಮುಂತಾದ ಗ್ರಾಮಗಳಲ್ಲಿ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ಇದೀಗ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಕಾ ವೈರಸ್ ಪತ್ತೆಯಾದ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ವಿಶೇಷ ಸಭೆಗಳನ್ನು ನಡೆಸಲಾಗಿದ್ದು, ಝಿಕಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ


ಜಿಕಾ ವೈರಸ್ ಎಂದರೇನು? ಇದು ತುಂಬಾ ಅಪಾಯಕಾರಿಯೇ?

ಝಿಕಾ ವೈರಸ್ ಸೋಂಕು ಹೆಚ್ಚು ಅಪಾಯಕಾರಿ. ಇದು ಸೊಳ್ಳೆಗಳಿಂದ ಹರಡುವ ವೈರಸ್. ಝಿಕಾ ವೈರಸ್ ಡೆಂಗ್ಯೂ ಮತ್ತು ಚಿಕನ್ ಗುನ್ಯಾಗಳ ರೀತಿಯಲ್ಲಿಯೇ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಝಿಕಾ ವೈರಸ್ ಸೋಂಕಿತ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಚ್ಚುತ್ತವೆ.

ಇದನ್ನೂ ಸಹ ಓದಿ: ಈ ದಿನಾಂಕದಂದು PM ಕಿಸಾನ್‌ನ 15 ನೇ ಕಂತಿನ ಮೊದಲ ಪಟ್ಟಿ ಬಿಡುಗಡೆ..! ನಿಮ್ಮ ಹೆಸರನ್ನು ಹೀಗೆ ಚೆಕ್‌ ಮಾಡಿ

ಝಿಕಾ ವೈರಸ್ ಲಕ್ಷಣಗಳು ಸಾಮಾನ್ಯವಾಗಿ ಏಳು ದಿನಗಳವರೆಗೆ ಇರುತ್ತದೆ. ಆದರೆ ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಯಾವುದೇ ಕಾರಣಕ್ಕೂ ಜ್ವರ ಕಾಣಿಸಿಕೊಂಡ ನಂತರ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ.

ಝಿಕಾ ವೈರಸ್ ಸೋಂಕಿನ ಲಕ್ಷಣಗಳು:

ಜಿಕಾ ವೈರಸ್ ಇತರ ಯಾವುದೇ ವೈರಲ್ ಸೋಂಕಿನಂತೆ ದೇಹದ ಮೇಲೆ ಪರಿಣಾಮ ಬೀರುತ್ತದೆ. ಝಿಕಾ ವೈರಸ್ ಸೋಂಕಿನ ನಂತರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಣ್ಣುಗಳು ಕೆಂಪಾಗುತ್ತವೆ. ಆದರೆ ಹೆಚ್ಚಿನ ಸೋಂಕಿತರು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.
ಝಿಕಾ ವೈರಸ್ ನಿಯಂತ್ರಣ ಹೇಗೆ:

ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ರೋಗ. ಆದ್ದರಿಂದ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಮನೆ, ಶಾಲೆಗಳ ಸುತ್ತಮುತ್ತ ಈಡಿಸ್ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಮುಚ್ಚಿದ ನೀರು ಸಂಗ್ರಹ ಪಾತ್ರೆಗಳು, ಹೂವಿನ ಕುಂಡಗಳಲ್ಲಿ ನಿಂತಿರುವ ನೀರನ್ನು ತೆಗೆಯಬೇಕು. ಟೈರ್, ಎಳನೀರು ಚಿಪ್ಪುಗಳ ರಾಶಿಯ ಮೇಲೆ ನಿಯಂತ್ರಣ ಹೇರಬೇಕು.

ಇತರೆ ವಿಷಯಗಳು:

ಬೆಲೆ ಏರಿಕೆ ಮಧ್ಯೆ ಜನತೆಗೆ ದೀಪಾವಳಿ‌ ಬಂಪರ್ ಗಿಫ್ಟ್.! ಆಧಾರ್ ಕಾರ್ಡ್ ತೋರಿಸಿದ್ರ ಸಾಕು, ಸಿಗಲಿದೆ 1 ಕೆಜಿ ಈರುಳ್ಳಿ

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಬಿಗ್‌ ಶಾಕ್!‌ ಈ ವೆಬ್‌ಸೈಟ್‌ ನಲ್ಲಿ ಅಪ್ಲೇ ಮಾಡಿದವರ ಡೇಟಾ ಹ್ಯಾಕ್

Leave a Comment