rtgh

ಉದ್ಯೋಗ ಖಾತ್ರಿಯಲ್ಲಿ ಮಹಿಳಾ ಕಾಯಕ ಕುಸಿತ ! ಈ ಯೋಜನೆ ರದ್ದಾಗದಿರಲು ಈ ಕೆಲಸ ಕಡ್ಡಾಯ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ನಡೆಸುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 3 ವರ್ಷದಿಂದ ಮಹಿಳೆಯರ ಸಂಖ್ಯೆ ಕುಸಿತ ಕಂಡಿದೆ. ಇದಕ್ಕೆ ಸರ್ಕಾರ ಏನು ಕ್ರಮವನ್ನು ಕೈಗೊಳ್ಳಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

udyoga khatri yojana

ಖಾತ್ರಿಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ದೃಷ್ಟಿಯಿಂದಲೇ 2021-22ರ ಸುಮಾರಿಗೆ ಈ ಬಗ್ಗೆ ಗ್ರಾಪಂ ಮಟ್ಟದಲ್ಲಿ ಜಾಗೃತಿಯ ಹಲವು ಕಾರ್ಯ ಕ್ರಮಗಳನ್ನು ಮಾಡಲಾಯಿತು.

ಪ್ರತಿ ಮನೆಗು ತೆರಳಿ ಮಹಿಳೆಯರು ಖಾತ್ರಿ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಆಹ್ವಾನವನ್ನು ನೀಡಲಾಯಿತು. ಆದರೂ ಮಹಿಳೆಯರ ಸಂಖ್ಯೆ ಹೆಚ್ಚಾಗಲಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಬರೋಬ್ಬರಿ 5.76 ಲಕ್ಷ ಮಹಿಳಾ ಮಾನವದಿನ ಕಡಿಮೆಯಾಗಿದೆ.

ಕಳೆದ ವರ್ಷಕ್ಕಿಂತ 5.76 ಲಕ್ಷ ಮಾನವ ದಿನ ಕಡಿಮೆ

2021-22ರ ಆರ್ಥಿಕ ವರ್ಷದಲ್ಲಿಒಟ್ಟು 31,48,244 ಮಹಿಳೆಯರಿಗೆ ಕೆಲಸ ನೀಡಲಾಗಿತ್ತು, ಇದರಲ್ಲಿ8,18,17,061 ಮಹಿಳಾ ಮಾನವ ದಿನಗಳು ಸೃಜನೆಯಾಗಿದ್ದು. ಅದೇರೀತಿ 2022-23ನೇ ಸಾಲಿನಲ್ಲಿ 26,97,032 ಮಹಿಳೆಯರಿಗೆ ಕೆಲಸ ನೀಡಲಾಗಿತ್ತು, ಇದರಲ್ಲಿ6,53,44,999 ಮಹಿಳಾ ಮಾನವ ದಿನಗಳು ಸೃಜನೆಯಾಗಿದೆ. ಇನ್ನು 2023-24 ಈ ಆರ್ಥಿಕ ವರ್ಷದಲ್ಲಿ 26,33,091 ಮಹಿಳೆಯರಿಗೆ ಕೆಲಸ ನೀಡಿದೆ, ಇದರಲ್ಲಿ6,47,68,765 ಮಹಿಳಾ ಮಾನವ ದಿನ ಸೃಜನೆಯಾಗಿದೆ ಕಳೆದ ವರ್ಷಕ್ಕಿಂತ 5,76,234 ಮಹಿಳಾ ಮಾನವ ದಿನ ರಾಜ್ಯದಲ್ಲಿ ಕುಸಿತಗೊಂಡಿರುವುದು ದೃಢವಾಗಿದೆ


ಈ ಆರ್ಥಿಕ ವರ್ಷ 2 ತಿಂಗಳು

ಈ 2023-24ನೇ ಸಾಲಿನಲ್ಲಿ ಇನ್ನೂ ಎರಡು ತಿಂಗಳಿದ್ದು, ಇದರಲ್ಲಿ ಇನ್ನೂ ಹೆಚ್ಚಳದ ನಿರೀಕ್ಷೆಗಳಿದೆ. ಆದರೆ, 2 ತಿಂಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಮಾನವ ದಿನಗಳು ಸೃಜಿಸಿದರೆ ಕಳೆದ ವರ್ಷಕ್ಕೆ ಸಮಾನವಾಗುವುದು. ಇಲ್ಲದಿದ್ದರೆ ಇನ್ನಷ್ಟು ಕುಸಿತವಾಗಲಿದೆ.

ಕೇಂದ್ರ ನೌಕರರಿಗೆ ಬಜೆಟ್‌ ಜಾಕ್‌ ಪಾಟ್! ‌ಸಂಬಳದಲ್ಲಿ ಶೇಕಡಾ ಇಷ್ಟು ಹೆಚ್ಚಳ

ದೇಶದ ಕೋಟ್ಯಾಂತರ ಮಹಿಳೆಯರಿಗೆ ಲಾಟ್ರಿ.! ಬಜೆಟ್‌ನಲ್ಲಿ ಘೋಷಣೆಯಾಯ್ತು ಲಕ್ಷಾಧಿಪತಿಯಾಗುವ ಯೋಜನೆ

Leave a Comment