ಹಲೋ ಸ್ನೇಹತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ವಾಹನ ಸವಾರರಿಗೆ ಮತ್ತು ಜನಸಾಮಾನ್ಯರಿಗೆ ಒಂದು ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕಾದ ವಿಷಯವಾಗಿದೆ ಯಾವ ದಿನ ಯಾವ ನಗರದಲ್ಲಿ ಯಾವ ಕಾರಣಕ್ಕೆ ಸಂಚಾರ ಮಾರ್ಗ ಬದಲಾವಣೆಯಾಗಲಿದೆ ಪರ್ಯಾಯ ವ್ಯವಸ್ಥೆ ಏನು ಎಲ್ಲಿ ಪಾರ್ಕಿಂಗ್ ಮಾಡಬೇಕು ಎಂಬ ಎಲ್ಲಾ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

ವಾಹನ ಮಾರ್ಗ ಎಲ್ಲೆಲ್ಲಿ ಬದಲಾವಣೆ
ಶಿವಮೊಗ್ಗ ಕಡೆಯಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು ಹಾರನಹಳ್ಳಿ ಸವಳಂಗ ಮಾರ್ಗವಾಗಿ ಹೋಗಬಹುದು. ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಸವಳಂಗ ಹಾರನಹಳ್ಳಿ ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರಬೇಕು.
ಸಾಗರ ಮಾರ್ಗದಿಂದ ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಆಲ್ಕೊಳ ಸರ್ಕಲ್ ಗೋಪಾಳ ಸರ್ಕಲ್ ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು. ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ ಆಲ್ಕೊಳ ಮಾರ್ಗವಾಗಿ ಸಾಗರ ರಸ್ತೆ ಬಂದು ಸೇರಬಹುದು.
ಇದನ್ನೂ ಸಹ ಓದಿ: ರೇಷನ್ ಕಾರ್ಡ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್.!! ರದ್ದಾದ ಪಡಿತರ ಚೀಟಿ ಅಧಿಕೃತ ಲಿಸ್ಟ್ ಪ್ರಕಟ
ಶಿವಮೊಗ್ಗ ನಗರದಿಂದ ಅಬ್ಬಲಗೆರೆ, ಕೊಮ್ಮನಾಳ್, ಕುಂಚೇನಹಳ್ಳಿ ತಾಂಡಗಳಿಗೆ ಸಂಚರಿಸುವ ಎಲ್ಲಾ ವಾಹನಗಳು ರಾಗಿಗುಡ್ಡ ಕುವೆಂಪು ನಗರದ ಮಾರ್ಗವಾಗಿ ಹೋಗಬೇಕಾಗುವುದು. ಅಬ್ಬಲಗೆರೆ, ಕೊಮ್ಮನಾಳ್, ಕುಂಚೇನಹಳ್ಳಿ ತಾಂಡಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು ಕುವೆಂಪು ನಗರ, ರಾಗಿಗುಡ್ಡ, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಚಲಿಸಬೇಕು. ಈ ದಿನ ಸಂಚಾರ ಬದಲಾವಣೆಯ ಸಮಯ ನೋಡುವುದಾದರೆ ಜನವರಿ.12. 2024 ರಂದು ಬೆಳಗ್ಗೆ 6 ರಿಂದ ಸಂಜೆ 6.3ರವರೆಗೆ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ
ಎಂ.ಆರ್.ಎಸ್ ಸರ್ಕಲ್ ಬೈಪಾಸ್ ರಸ್ತೆ ಸಂದೇಶ್ ಮೋಟಾರ್ ಸರ್ಕಲ್‍ನಿಂದ ಅಶೋಕ ಸರ್ಕಲ್ ಮೂಲಕ ಹೆಲಿಪ್ಯಾಡ್ ಮಾರ್ಗವಾಗಿ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ ಸೈಕಲೋತ್ಸವ ಸರ್ಕಲ್‍ನಿಂದ ವಿನೋಬನಗರ ಕೆ.ಇ.ಬಿ ಆಫೀಸ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಶಿವಮೊಗ್ಗದ ಆಲ್ಕೊಳ ಸರ್ಕಲ್‍ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಹೆಲಿಪ್ಯಾಡ್ ಸರ್ಕಲ್‍ನಿಂದ ಜೈಲ್ ಸರ್ಕಲ್‍ವರೆಗೆ ಹಾಗೂ ಜೈಲ್ ಸರ್ಕಲ್‍ನಿಂದ ಲಕ್ಷ್ಮೀ ಟಾಕೀಸ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ರಾಜ್‍ಕುಮಾರ್ ಸರ್ಕಲ್‍ನಿಂದ ಮೇದಾರ ಕೇರಿ ರಸ್ತೆ, ಬೊಮ್ಮನಕಟ್ಟೆ ರೈಲ್ವೆ ಗೇಟ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನಕಟ್ಟೆ ರೈಲ್ವೆ ಗೇಟ್‍ಗೆ ಹೋಗುವ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.
ಸಂಚಾರ ಮಾರ್ಗ ಬದಲಾವಣೆ ಮಾಡಲು ಕಾರಣ
ಜನವರಿ.12. 2024 ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಯುವ ನಿಧಿ ಯೋಜನೆ ಚಾಲನೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಮತ್ತು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದ ವಿವಿಧೆಡೆ ವಾಹನ ಸಂಚಾರದ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ. ಇದರ ಸಲುವಾಗಿ ಈ ಬದಲಾವಣೆಯನ್ನು ಮಾಡಲಾಗಿದೆ
ಇತರೆ ವಿಷಯಗಳು
- ಈ ಕಾರ್ಯಕರ್ತರಿಗೆ ಇನ್ಮುಂದೆ ವೇತನ ನೇರವಾಗಿ ಬ್ಯಾಂಕ್ ಖಾತೆಗೆ! ಕೇಂದ್ರದಿಂದ ಆದೇಶ
- ಮಹಿಳೆಯರಿಗೆ ಫ್ರೀ ಭಾಗ್ಯ.!! ಈ ದಾಖಲೆ ಇದ್ರೆ ನಿಮ್ಮದಾಗಲಿದೆ ಉಚಿತ ಸೋಲಾರ್ ಹಿಟ್ಟಿನ ಗಿರಣಿ; ನೀವು ಅಪ್ಲೇ ಮಾಡಿ