ಹಲೋ ಸ್ನೇಹಿತರೇ ನಮ್ಮ ಇಂದಿನ ಲೇಖನಕ್ಕೆ ಸ್ವಾಗತ ಸರ್ಕಾರವು ಮಕ್ಕಳ ವಿದ್ಯಾಬ್ಯಾಸಕ್ಕೆ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ ಹಾಗೆ ಸರ್ಕಾರವು ಅಂಗನವಾಡಿ ಮಕ್ಕಳ ಅಭಿವೃದ್ದಿಗಾಗಿ ಅವರ ಉತ್ತಮ ಆರೋಗ್ಯ ವೃದ್ದಿಸಲು ಹೊಸ ನಿಯಮವನ್ನು ಜಾರಿಗೆ ತಂದಿದೆ ಅಂದರೆ ಅಂಗನವಾಡಿಗಳಲ್ಲಿ ನೀಡುತಿದ್ದ ಫುಡ್ ಆಹಾರದ ಬಗೆಗಳನ್ನು ಬದಲಾಗಿಸಲಾಗಿದೆ. ಈ ಹೊಸ ಬಗೆಗಳ ಯಾವುವು ಎಂದು ತಿಳಿಯಲು ಈ ಲೇಖನವನ್ನು ಓದಿ.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ ಎನ್ನುವ ಕೂಗು ಎಲ್ಲಾಕಡೆ ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷವೇ ಮೆನು ಬದಲಾವಣೆ ಮಾಡಿ, ಪೌಷ್ಟಿಕ ಆಹಾರ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದತ್ತು. ಈ ಹಿನ್ನೆಲೆಯಲ್ಲಿ ಈಗ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಹೊಸ ಮೆನು ನೀಡಲಾಗುತ್ತಿದ್ದು, ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಆಹಾರ ಸರಬರಾಜು ಈಗಾಗಲೇ ಮಾಡಲಾಗುತ್ತಿದೆ.
ಹೊಸ ಬಗೆಗಳು ಯಾವುವು?
ಅನ್ನ ಸಾಂಬಾರ್, ಉಪ್ಪಿಟ್ಟು ಮತ್ತು ಅನ್ನ ಕಿಚಿಡಿ ಹಿಂದಿನಿಂದಲೂ ನೀಡಲಾಗುತ್ತಿದೆ. ಇದರ ಜೊತೆಗೆ ಈಗ ಹೆಚ್ಚುವರಿಯಾಗಿ 25 ಗ್ರಾಂ ತೂಕದ ಗೋಧಿ ಲಾಡು, ಸಿಹಿ ಪುಷ್ಟಿ, ಸಿರಿಧಾನ್ಯದ ಲಾಡು ವಿತರಣೆ ಮಾಡಬೇಕಿದೆ. ಪ್ರತಿ ಸಾಮಾನ್ಯ ಮಗುವಿಗೆ ಇದರ ವೆಚ್ಚ 8 ರೂ. ಆದರೆ, ಅಪೌಷ್ಟಿಕ ಮಗುವಿನ ವೆಚ್ಚ 12 ರೂ. ಆಗಿರಲಿದೆ.
6 ತಿಂಗಳಿಂದ 3 ವರ್ಷದ ಮಗುವಿಗೆ ಮನೆಯಲ್ಲಿಯೇ ತಿನ್ನಿಸಲು ಅನುಕೂಲವಾಗುವಂತೆ ಬೆಲ್ಲ ಸಹಿತ ಮತ್ತು ರಹಿತವಾಗಿ ಪುಷ್ಟಿಯನ್ನು ಸಹ ನೀಡಲಾಗುತ್ತದೆ.
ಇದನ್ನೂ ಸಹ ಓದಿ; ಈ ಕಾರ್ಡ್ ಹೊಂದಿರುವವರಿಗೆ ಕಂತಿನ ರೂಪದಲ್ಲಿ ಹಣ ನೀಡಲು ಪ್ರಾರಂಭ! ಸರ್ಕಾರದಿಂದ 1,500 ಖಾತೆಗೆ ಜಮಾ
ಡಿಎಫ್ ಆರ್‌ಎಲ್ ಅನುಮೋದನೆ
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಸರ್ಕಾರ ಅಂಗನವಾಡಿಗಳ ಆಹಾರದ ಮೆನು ಬದಲಾವಣೆ ಮಾಡಿದ್ದು, ಹೊಸ ಮೆನುವಿಗೆ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (DFRL) ಅನುಮೋದನೆ ನೀಡಿದೆ. ಎಂಎಸ್‌ಪಿಸಿ ಮತ್ತು 3 ಅರ್ಹ ಬಿಐಎಸ್ ಪರವಾನಗಿ ಹೊಂದಿದ ಮಹಿಳಾ ಗುಂಪುಗಳ ನಡುವೆ ಆಹಾರ ಪೂರೈಕೆ ಸಂಬಂಧ ಕರಾರು ಮಾಡಿಕೊಳ್ಳಲಾಗಿದೆ. ಪರವಾನಗಿ ಹೊಂದಿದ ಮಹಿಳಾ ಗುಂಪುಗಳು ಮತ್ತು ಡಿಎಫ್‌ಆರ್‌ಎಲ್ ಅನುಮೋದಿಸಿದ ಸೂತ್ರದಂತೆಯೇ ಕಟ್ಟುನಿಟ್ಟಾಗಿ ಮಕ್ಕಳಿಗೆ ಆಹಾರ ಪೂರೈಕೆ ಮಾಡುವಂತೆಯೂ ಇಲಾಖೆಯು ಆದೇಶ ನೀಡಲಾಗಿದೆ.
ಪೂರೈಕೆ ನಿಂತಿತ್ತು
ಹೊಸ ಮೆನು ನೀಡುವ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಳೆದ ಎರಡು ತಿಂಗಳಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಿರಲಿಲ್ಲ. ಒಂದೆಡೆ ಮೊಟ್ಟೆ ಮತ್ತೊಂದೆಡೆ ಆಹಾರ ಪೂರೈಕೆಯೂ ನಿಂತಿದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದ್ದರು. ಜಿಲ್ಲಾಡಳಿತ ಮೊಟ್ಟೆ ಖರೀದಿಗೆ ಹಣ ನೀಡುವ ಭರವಸೆ ನೀಡಿದ ನಂತರ ಮೊಟ್ಟೆ ಸಮಸ್ಯೆ ಪರಿಹಾರ ಕಂಡುಕೊಂಡಿತ್ತು. ಆಹಾರ ಪೂರೈಕೆಯೂ ನಿಂತಿದ್ದರಿಂದ ಇದರ ವಿರುದ್ಧವೂ ಸಾರ್ವಜನಿಕರು ಬೇಸರ ಹೊರಹಾಕಿದ್ದರು. ಆದರೆ, ಈಗ ಹೊಸ ಮೆನು ಅಂಗನವಾಡಿಗಳಿಗೆ ತಲುಪುತ್ತಿವೆ ಎನ್ನುವುದು ಇಲಾಖೆ ಅಧಿಕಾರಿಗಳ ಸ್ಪಷ್ಟನೆ ನೀಡಿದ್ದಾರೆ.
ಇತರೆ ವಿಷಯಗಳು
- ಬ್ಯಾಂಕ್ ನಿಂದ ಗ್ರಾಹಕರು ಮೋಸ ಹೋದಲ್ಲಿ RBI ನೀಡಲಿದೆ ಇಷ್ಟು ಪರಿಹಾರ..! ಹಣ ಪಡೆಯಲು ಈ ನಿಯಮ ಪಾಲಿಸಿ
- ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಹುದ್ದೆಗಳಿಗೆ ಬಂಪರ್ ನೇಮಕಾತಿ, ಉತ್ತಮ ಸಂಬಳ